ಬಿಎಸ್ ವೈ ವಿರುದ್ಧ ರೇವುನಾಯಕ ಅಸಮಾಧಾನ

Revu naik belamagi outrage against bsy

21-04-2018

ಕಲಬುರಗಿ: ತನಗೆ ಟಿಕೆಟ್ ಕೈತಪ್ಪಲು ಯಡಿಯೂರಪ್ಪ ನೇರ ಹೊಣೆ, ಕೆಜೆಪಿಗೆ ಹೋಗದ ಕಾರಣ ಸೇಡು ತೀರಿಸಿಕೊಂಡಿದ್ದಾರೆ ಎಂದು ಕಲಬುರಗಿಯಲ್ಲಿ ಮಾಜಿ ಸಚಿವ ರೇವುನಾಯಕ ಬೆಳಮಗಿ ಆರೋಪ ಮಾಡಿದ್ದಾರೆ. ಕಲಬುರಗಿಯ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಆಕಾಂಕ್ಷಿಯಾಗಿದ್ದ ರೇವುನಾಯಕ ಬೆಳಮಗಿ, ಟಿಕೆಟ್ ತಪ್ಪಿದ ಹಿನ್ನೆಲೆ ತೀವ್ರ ಅಸಮದಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ನಾಯಕರು ನನ್ನ ಹೆಸರು ಫೈನಲ್ ಮಾಡಿದ್ದರೂ, ಯಡಿಯೂರಪ್ಪ ಟಿಕೆಟ್ ತಪ್ಪಿಸಿದ್ದಾರೆ. ಯಾವ ಮಾನದಂಡದ ಮೇಲೆ ಟಿಕೆಟ್ ನೀಡಲಾಗಿದೆ ಯಡಿಯೂರಪ್ಪ ಉತ್ತರಿಸಲಿ.

ಕಾಂಗ್ರೆಸ್ ಬಿಟ್ಟು ಈಗಷ್ಟೆ ಬಿಜೆಪಿಗೆ ಬಂದ ಕ್ರಿಕೆಟ್ ಬುಕ್ಕಿಗೆ ಟಿಕೆಟ್ ಯಾಕೆ ನೀಡಿದ್ದಿರಿ ಎಂದು ಪ್ರಶ್ನಿಸಿದ ಅವರು, ಹಣ ಮತ್ತು ಸೇಡಿನ ರಾಜಕಾರಣ ನಡಯುತ್ತಿದೆ ಎಂದು ದೂರಿದ್ದಾರೆ. ತನ್ನ ಬಳಿ ಹಲವು ಪಕ್ಷದವರು ಸಂಪರ್ಕದಲ್ಲಿದ್ದಾರೆ, ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

revu naik belamgi ticket ಕಾರ್ಯಕರ್ತ ತೀರ್ಮಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ