ಬಿಜೆಪಿ 3ನೇ ಪಟ್ಟಿ ಬಿಡುಗಡೆ

BJP 3rd list announced

20-04-2018

ಬೆಂಗಳೂರು: ಮೇ 12ರಂದು ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 59 ಚುನಾವಣಾ ಸ್ಪರ್ಧಾಕಾಂಕ್ಷಿಗಳಿಗೆ ಟಿಕೆಟ್ ಪ್ರಕಟಿಸಲಾಗಿದೆ. ಮೊದಲ ಪಟ್ಟಿಯಲ್ಲಿ ಕೆಜಿಎಫ್ ಕ್ಷೇತ್ರಕ್ಕಾಗಿ ವೈ.ಸಂಪಂಗಿ ಅವರಿಗೆ ನೀಡಿದ್ದ ಟಿಕೆಟ್ ಅನ್ನು ಬದಲಿಸಿ ಶ್ರೀಮತಿ ಅಶ್ವಿನಿ ಅವರಿಗೆ ಟಿಕೆಟ್ ನೀಡಲಾಗಿದೆ.

ಬಿಜೆಪಿಯ ಮೊದಲ ಪಟ್ಟಿಯಲ್ಲಿ ನಿಪ್ಪಾಣಿಯಿಂದ ಮಾತ್ರ ಮಹಿಳೆಯೊಬ್ಬರಿಗೆ ಟಿಕೆಟ್ ನಿಡಲಾಗಿತ್ತು. ಶಶಿಕಲಾ ಜೋಲ್ಲೆ ಆ ಟಿಕೆಟ್ ಪಡೆದ ಏಕೈಕ ಮಹಿಳೆಯಾಗಿದ್ದರು. ಎಪ್ರಿಲ್ 16ರಂದು ಎರಡನೇ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿತ್ತಾದರೂ ಯಾವ ಮಹಿಳೆಗೂ ಸ್ಪರ್ಧೆಗೆ ಅವಕಾಶ ನೀಡಿರಲಿಲ್ಲ. ಅದು ವ್ಯಾಪಕ ಟೀಕೆಗೆ ದಾರಿ ಮಾಡಿ ಕೊಟ್ಟಿತ್ತು. ಈಗ 3ನೇ ಪಟ್ಟಿಯಲ್ಲಿ ಶ್ವೇತಾ ಗೋಪಾಲ್-ಕೆ.ಆರ್.ನಗರ ಹಾಗೂ ಸುಶೀಲಾ ದೇವರಾಜ್ ಅವರಿಗೆ ಟಿಕೆಟ್ ನೀಡಲಾಗಿದೆ.

ಬಿ.ಎಸ್.ಯಡಿಯೂರಪ್ಪ ನವರ ಎರಡನೇ ಪತ್ರ ಬಿ.ವೈ.ವಿಜಯೇಂದ್ರ ಸ್ಪರ್ಧಿಸುವರು ಎನ್ನುವ ಕಾರಣಕ್ಕೆ ಅತ್ಯಂತ ಕುತೂಹಲ ಕೆರಳಿಸಿರುವ ವರುಣಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಹೆಸರನ್ನು ಇನ್ನೂ ಪ್ರಕಟಿಸಿಲ್ಲ.

ಬಿಜೆಪಿ ಮೊದಲ ಪಟ್ಟಿಯಲ್ಲಿ 72 ಮಂದಿಗೆ ಎರಡನೇ ಪಟ್ಟಿಯಲ್ಲಿ 82 ಜನರಿಗೆ ಟಿಕೆಟ್ ಪ್ರಕಟಿಸಿತ್ತು. ಈಗ ಇನ್ನೂ 11 ಕ್ಷೇತ್ರಗಳಿಗೆ ಸ್ಪರ್ಧಾಕಾಂಕ್ಷಿಗಳ ಹೆಸರನ್ನು ಪ್ರಕಟಿಸಬೇಕಿದೆ. ಮೂರನೇ ಪಟ್ಟಿಯಲ್ಲಿ ಟಿಕೆಟ್ ಪಡೆದ ಪ್ರಮುಖರು, ಕರುಣಾಕರ ರೆಡ್ಡಿ-ಹರಪನಹಳ್ಳಿ, ಎನ್.ವೈ.ಗೋಪಾಲಕೃಷ್ಣ-ಕೂಡ್ಲಗಿ, ಅರಸೀಕೆರೆ-ವಿ.ಸೋಮಣ್ಣ ಪುತ್ರ ಡಾ.ಅರುಣ್ ಸೋಮಣ್ಣ, ಮಾಜಿ ಸಚಿವ ರಾಮಚಂದ್ರೇಗೌಡರ ಮಗ ಸಪ್ತಗಿರಿಗೌಡ- ಗಾಂಧಿ ನಗರ, ಎಂ.ಪಿ.ಕುಮಾರಸ್ವಾಮಿ-ಮೂಡಿಗೆರೆ, ಕೆ.ಜಿ.ಬೋಪಯ್ಯ-ವಿರಾಜಪೇಟೆ, ಎಸ್.ಎ.ರಾಮದಾಸ್-ಕೃಷ್ಣರಾಜ.


ಸಂಬಂಧಿತ ಟ್ಯಾಗ್ಗಳು

candidates v.somanna ಮಹಿಳೆ ಪ್ರಕಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ