ಅಪ್ರಾಪ್ತೆಯನ್ನು ವೇಶ್ಯಾವಾಟಿಕೆಗೆ ತಳ್ಳಲು ಯತ್ನ

Attempt to push a Minor girl into prostitution

20-04-2018

ಬೆಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ವೇಶ್ಯಾವಾಟಿಕೆ ದಂಧೆಗೆ ತಳ್ಳಲು ಯತ್ನಿಸಿದ ಐವರನ್ನು ಬಂಧಿಸಿ ಪ್ರಮುಖ ಇಬ್ಬರು ಆರೋಪಿಗಳಿಗಾಗಿ ಪುಟ್ಟೇನಹಳ್ಳಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

ಪುಟ್ಟೇನಹಳ್ಳಿಯ ಆಶಾ, ಜೆಸಿಕಾ, ವೀರೇಶ್, ಭರತ್, ಮುರುಳಿ ಬಂಧಿತ ಆರೋಪಿಗಳಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಸಗಾಯ್‍ ರಾಜ್ ಹಾಗೂ ಮೇರಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.

ಕಳೆದ 2010ರಲ್ಲಿ ಅಪ್ರಾಪ್ತ ಬಾಲಕಿಯ ತಾಯಿ ಮೃತರಾಗಿದ್ದರಿಂದ ದೊರೆಸ್ವಾಮಿ ಪಾಳ್ಯದ ಮಾವ ಸಗಾಯ್‍ ರಾಜ್, ಅತ್ತೆ ಮೇರಿ ಜೊತೆ ವಾಸವಾಗಿದ್ದಳು. ಈ ವೇಳೆ ಸಗಾಯ್‍ ರಾಜ್ ಆಶಾ ಎಂಬುವರ ಮನೆಗೆ ಬಾಲಕಿಯನ್ನು ಕಳುಹಿಸಿದ್ದ. ಆಶಾಳ ಪತಿ ವೀರೇಶ್ ಮನೆಯಲ್ಲಿದ್ದ ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರಕ್ಕೆ ಯತ್ನಿಸಿದ್ದು, ಆಶಾ ಜೆಸಿಕಾಳಿಗೆ ಬಾಲಕಿಯನ್ನು ಮಾರಾಟ ಮಾಡಿದ್ದಳು.

ಜೆಸಿಕಾ ಬಾಲಕಿಯನ್ನು ಬೆದರಿಸಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದು, ಕಾರು ಚಾಲಕ ಮುರಳಿ ಕೂಡ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರಕ್ಕೆ ಯತ್ನಿಸಿದ್ದ. ಇವರಿಂದ ತಪ್ಪಿಸಿಕೊಂಡ ಬಾಲಕಿ ತಮಿಳುನಾಡಿನ ವಿಳುಪುರಂಗೆ ಪರಾರಿಯಾಗಿದ್ದಾಳೆ. ಅಲ್ಲಿಯೂ ಬಾಲಕಿಯನ್ನು ಬಿಡದ ಜೆಸಿಕಾ, ಪತಿ ವೀರೇಶ್ ಸಂಬಂಧಿ ಭರತ್ ಮೂಲಕ ಹಿಂಸೆ ನೀಡಿದ್ದು, ಕೊನೆಗೆ ಬಾಲಕಿಯು ವಿಳುಪುರಂ ಪೊಲೀಸರಿಗೆ ದೂರು ನೀಡಿದ್ದಳು. ಅಲ್ಲಿಂದ ಕುಕ್ಕೇನಹಳ್ಳಿ ಪೊಲೀಸರಿಗೆ ಪ್ರಕರಣ ವರ್ಗಾವಣೆಯಾಗಿದೆ. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಬಾಲಕಿಯು ನನಗೆ ತಂದೆ-ತಾಯಿ ಇಲ್ಲ, ಅತ್ತೆ-ಮಾವ ಹಾಗೂ ಸಂಬಂಧಿಕರೇ ವೇಶ್ಯಾವಾಟಿಕೆ ದೂಡಿದ್ದರು ಎಂದು ತಿಳಿಸಿದ್ದು, ಬಾಲಕಿಯನ್ನು ಚಿಲ್ಡ್ರನ್ ಹೋಂಗೆ ಕಳುಹಿಸಿಕೊಡಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ