ಜೆಡಿಎಸ್ 2ನೇ ಪಟ್ಟಿ ಬಿಡುಗಡೆ

JDS 2nd list announced

20-04-2018

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಜಾತ್ಯತೀತ ಜನತಾದಳ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 58 ಆಕಾಂಕ್ಷಿಗಳಿಗೆ ಟಿಕೆಟ್ ನೀಡಲಾಗಿದೆ. ಮೊದಲ ಪಟ್ಟಿಯಲ್ಲಿ 126 ಆಕಾಂಕ್ಷಿಗಳಿಗೆ ಟಿಕೆಟ್ ನೀಡಲಾಗಿತ್ತು.

ಎರಡನೇ ಪಟ್ಟಿಯಲ್ಲಿ ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ-ಚನ್ನಪಟ್ಟಣ, ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ-ಬಸವಕಲ್ಯಾಣ ಟಿಕೆಟ್ ಪ್ರಕಟಿಸಲಾಗಿದೆ.

ಇತ್ತೀಚಿಗೆ ಜೆಡಿಎಸ್ ಸೇರಿದ್ದ ಚಿತ್ರ ನಟ ಶಶಿಕುಮಾರ್-ಹೊಸದುರ್ಗ, ಮಾಜಿ ಸಚಿವ ಪ್ರಕಾಶ್ ಖಂಡ್ರೆ-ಭಾಲ್ಕಿ, ಪಿ.ರಮೇಶ್ -ಸಿ.ವಿ.ರಾಮನ್ ನಗರ, ರಾಮಚಂದ್ರ-ರಾಜಾ ರಾಜೇಶ್ವರಿ ನಗರ, ಜೇಡರಹಳ್ಳಿ ಕೃಷ್ಣಪ್ಪ-ರಾಜಾಜಿನಗರ, ಹೇಮಚಂದ್ರ ಸಾಗರ್-ಚಿಕ್ಕಪೇಟೆ ಟಿಕೆಟ್ ನೀಡಲಾಗಿದೆ. ನಾಮ ಪತ್ರ ಸಲ್ಲಿಕೆಗೆ ಏಪ್ರಿಲ್ 24 ಕಡೆಯ ದಿನವಾಗಿದ್ದು, ಜೆಡಿಎಸ್ ಇನ್ನೂ 40ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಬೇಕಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ