ತಂದೆ ಅಕಾಲಿಕ ಮರಣ: ಪುತ್ರಿ ಆತ್ಮಹತ್ಯೆ

Father died prematurely: daughter committed suicide

20-04-2018

ಬೆಂಗಳೂರು: ಹಲಸೂರಿನ ಜೋಗುಪಾಳ್ಯದಲ್ಲಿ ತಂದೆಯ ಅಕಾಲಿಕ ಸಾವಿನಿಂದ ನೊಂದ ಪುತ್ರಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಜೋಗುಪಾಳ್ಯದ ಲಕ್ಷ್ಮಿ (19) ಎಂದು ಗುರುತಿಸಲಾಗಿದೆ. ತಂದೆ ಕೆಲ ತಿಂಗಳ ಹಿಂದೆ ಮೃತಪಟ್ಟಿದ್ದು, ತಾಯಿ ಜೊತೆ ವಾಸವಾಗಿದ್ದ ಲಕ್ಷ್ಮಿ,ಎಸ್‍ಎಸ್‍ಎಲ್‍ಸಿ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು.

ಇತ್ತೀಚೆಗೆ ಕೆಲಸ ಬಿಟ್ಟಿದ್ದ ಆಕೆ, ನಿನ್ನೆ ತಾಯಿ ಕೆಲಸಕ್ಕೆ ಹೋಗಿ ಒಂಟಿಯಾಗಿದ್ದಾಗ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಕರಣ ದಾಖಲಿಸಿರುವ ಹಲಸೂರು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

suicide SSLC ಬೆಂಕಿ ಪೊಲೀಸರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ