ಶಾಸಕನಿಗೆ ಗ್ರಾಮಸ್ಥರ ತರಾಟೆ

villagers protest against mla

20-04-2018

ರಾಯಚೂರು: ಮತ ಕೇಳಲು ಬಂದ ಶಾಸಕರು ಹಾಗು ಕಾಂಗ್ರೆಸ್ ಮುಖಂಡರಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ರಾಯಚೂರಿನ ಮಾನವಿ ವಿಧಾನಸಭಾ ಕ್ಷೇತ್ರದ ತಡಕಲ್ ನಲ್ಲಿ ನಡೆದಿದೆ. ಮಾನವಿ ಶಾಸಕ ಹಂಪಯ್ಯ ನಾಯಕ ಹಾಗು ಕಾಂಗ್ರೆಸ್ ಮಖಂಡರು ಮತ ಕೇಳಲು ಹೋದಾಗ ಗ್ರಾಮಸ್ಥರು, ತಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ, ಗ್ರಾಮ ಅಭಿವೃದ್ಧಿಯಾಗಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಗ್ರಾಮಸ್ಥರ ತರಾಟೆಯಿಂದಾಗಿ ಸ್ಥಳದಿಂದ ಶಾಸಕರು ಹಾಗು ಮುಖಂಡರು ಕಾಲ್ಕಿತ್ತಿದ್ದಾರೆ. ಮಾನವಿಯಲ್ಲಿ ಹಂಪಯ್ಯ ನಾಯಕ 2008 ಹಾಗು 2013ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈಗ ಮತ್ತೆ ಕಾಂಗ್ರೆಸ್ಸಿನಿಂದ ಕಣಕ್ಕಿಳಿದಿದ್ದು, ಮತ ಕೇಳಲು ಬಂದಾಗ ಘಟನೆ ನಡೆದಿದೆ. ತರಾಟೆ ತೆಗೆದುಕೊಂಡ ದೃಶ್ಯಗಳು ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

 

 


ಸಂಬಂಧಿತ ಟ್ಯಾಗ್ಗಳು

villagers G.Hampayya ತರಾಟೆ ಶಾಸಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ