ಬೇಲೂರು ಕಾಂಗ್ರೆಸ್ ಟಿಕೆಟ್ ಗೊಂದಲಕ್ಕೆ ತೆರೆ

Beluru congress ticket issued to keerthana rudresh gowda

20-04-2018

ಹಾಸನ: ಬೇಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನ ದಿವಂಗತ ವೈಎನ್ ರುದ್ರೇಶ್ ಗೌಡರ ಪತ್ನಿ ಎಂಎಲ್ ಕೀರ್ತನಾಗೆ ಟಿಕೆಟ್ ನೀಡುವ ಮೂಲಕ ಬೇಲೂರಿನಲ್ಲಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ ಜಿ.ಪರಮೇಶ್ವರ್.

ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ತಮ್ಮ ಕಚೇರಿಯಲ್ಲಿ ಬೇಲೂರು ಕ್ಷೇತ್ರದ ಕಾಂಗ್ರೆಸ್ ಬಿ ಫಾರಂ ಅನ್ನು ಕೀರ್ತನ ರುದ್ರೇಶ್ ಗೌಡರಿಗೆ ನೀಡಿದ್ದಾರೆ. ರುದ್ರೇಶ್ ಗೌಡ ಸರಳ ಸಜ್ಜನಿಕೆ ವ್ಯಕ್ತಿ. ಆವರು ಮಾಡಿರುವ ಕೆಲಸ ಕಾರ್ಯಗಳಿಂದ ಜನ ಬೇಲೂರಲ್ಲಿ ಕಾಂಗ್ರೆಸ್ ಕೈ ಹಿಡಿದೇ ಹಿಡಿಯುತ್ತಾರೆ ಎಂದು ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿದ್ದಾರೆ.

ನಾನು ಅಭ್ಯರ್ಥಿ ಆಗುತ್ತೇನೆ ಎಂದು ಕನಸು ಮನಸ್ಸಿನಲ್ಲಿಯೂ ಕೂಡ ಎಣಿಸಿರಲಿಲ್ಲ. ನನ್ನ ಪತಿಯ ಅಗಲಿಕೆ ನೋವುಂಟುಮಾಡಿದೆ, ಕಾರ್ಯಕರ್ತರು ಒಮ್ಮತದಿಂದ ನೀವೇ ನಿಲ್ಲಬೇಕೆಂದು ಪಟ್ಟು ಹಿಡಿದುದರಿಂದ ನಾನು ಒಪ್ಪಿಕೊಂಡೆ. ಏಪ್ರಿಲ್ 23ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದು, ಅಪಾರ ಕಾರ್ಯಕರ್ತರುಗಳಿಗೆ ನನ್ನ ಗೆಲುವು ಅರ್ಪಣೆ ಮಾಡುತ್ತೇನೆ ಎಂದು ರುದ್ರೇಶ್ ಗೌಡರ ಪತ್ನಿ ಕೀರ್ತನ ಪ್ರಕಟಣೆ ಮೂಲಕ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ