‘ನೀರು ಕೊಡಿಸಿ ಇಲ್ಲ ದಯಾಮರಣ ಕೊಡಿ’20-04-2018

ಗದಗ: ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಒಂದು ಸಾವಿರಕ್ಕೂ ಹೆಚ್ಚು ದಿನದಿಂದ ನಡೆಯುತ್ತಿರುವ ಮಹದಾಯಿ ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಗದ ಕಾರಣ, ದಯಾಮರಣಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಿರುವ ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ್ ಸೊಬರದಮಠ, ಏಪ್ರಿಲ್ 25ರಂದು ದೆಹಲಿಯಲ್ಲಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಲಿದ್ದಾರೆ. ಎಷ್ಟು ಬಾರಿ ಹೋರಾಟ ಮಾಡಿದರೂ ರಾಜಕೀಯ ಪಕ್ಷಗಳು ಸ್ಪಂದಿಸದ ಹಿನ್ನೆಲೆ, ದಯಾಮರಣಕ್ಕೆ ಅರ್ಜಿ ಸಲ್ಲಿಸುತ್ತಿರುವುದಾಗಿ ವೀರೇಶ್ ಸೊಬರದಮಠ ತಿಳಿಸಿದ್ದಾರೆ. 'ನೀರು ಕೊಡಿಸಿ ಇಲ್ಲ ದಯಾಮರಣ ಕೊಡಿ' ಎಂದು ಆಗ್ರಹಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

mahadayi Veeresh Sobaradmath ಆಗ್ರಹ ಹೋರಾಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ