ಕಮಲ ಹಿಡಿದ ಎನ್.ವೈ.ಗೋಪಾಲಕೃಷ್ಣ

n.y Gopala krishna joined BJP

20-04-2018

ಬೆಂಗಳೂರು: ಮಾಜಿ ಉಪಸಭಾಧ್ಯಕ್ಷ ಎನ್.ವೈ.ಗೋಪಾಲಕೃಷ್ಣ ಹಾಗೂ ಚಲವಾದಿ ನಾರಾಯಣ ಸ್ವಾಮಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಯಡಿಯೂರಪ್ಪ ನಿವಾಸದಲ್ಲಿ ಸೇರ್ಪಡೆಯಾದರು.

ಎರಡು ವರ್ಷದಿಂದ ಗೋಪಾಲಕೃಷ್ಣ ಅವರನ್ನು ಕರೆತರುವ ಪ್ರಯತ್ನ ಮಾಡುತ್ತಿದ್ದೆವು. ಜನಾರ್ದನ ರೆಡ್ಡಿ ಪ್ರಯತ್ನದಿಂದ ಗೋಪಾಲಕೃಷ್ಣ ಇಂದು ಬಿಜೆಪಿಗೆ ಬಂದಿದ್ದಾರೆ. ಯಾವ ಕಾರಣಕ್ಕೂ ಕಾಂಗ್ರೆಸ್ 50-60ಸ್ಥಾನಕ್ಕಿಂತ ಹೆಚ್ಚು ಗೆಲ್ಲಲ್ಲ. ಶಿಕಾರಿಪುರದಲ್ಲಿ 50,000ಕ್ಕಿಂತ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇನೆ. ಬದಾಮಿಯಲ್ಲಾಗಲಿ, ಚಾಮುಂಡೇಶ್ವರಿಯಲ್ಲಾಗಲಿ, ವರುಣಾದಲ್ಲಾಗಲಿ ಸಿದ್ದರಾಮಯ್ಯ ಹಾಗೂ ಅವರ ಮಗ ಗೆಲ್ಲಲ್ಲ. ಮೇ 1ರಿಂದ ಕರ್ನಾಟಕದಲ್ಲಿ ಪ್ರಧಾನಿ ಪ್ರವಾಸ ನಿಗದಿಯಾಗಲಿದೆ. ನಾಳೆ ಲಂಡನ್ ನಿಂದ ಹಿಂದುರಿಗಿದ ಮೇಲೆ ಪ್ರವಾಸ ನಿಗದಿಯಾಗಲಿದೆ. ಇಂದು ದೆಹಲಿಯಿಂದ ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆಯಾಗಲಿದೆ. ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಹೇಳಿದ ಮೇಲೂ ಬೇಳೂರು ಗೋಪಾಲಕೃಷ್ಣ ಬಂಡಾಯ ಎದ್ದರೆ ಏನು ಮಾಡೋದು, ಅವರು ಏನುಬೇಕಾದರೂ ಮಾಡಲು ಸ್ವತಂತ್ರರಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ಈ ವೇಳೆ ಮಾತನಾಡಿದ ಎನ್.ವೈ.ಗೋಪಾಲಕೃಷ್ಣ ನನ್ನ ಸಿದ್ಧಾಂತಗಳಿಗೆ ಕಾಂಗ್ರೆಸ್ ಪಕ್ಷದಲ್ಲಿ ಬೆಲೆ ಇಲ್ಲ. ಬಳ್ಳಾರಿ ಮತ್ತು ಮೊಳಕಾಲ್ಮೂರು ಎರಡೂ ಕಡೆಗಳಲ್ಲಿ ಟಿಕೆಟ್ ಇಲ್ಲದಂತೆ ಮಾಡಿ ಪಿತೂರಿ ಮಾಡಿದರು. ಹಿಂದಿನಿಂದಲೂ ಯಡಿಯೂರಪ್ಪ ನನಗೆ ಆತ್ಮೀಯರು. ಮಾನವೀಯತೆ ಹೊಂದಿರುವ ವ್ಯಕ್ತಿ. ನಾನು ಉಪ ಸಭಾಧ್ಯಕ್ಷ ಆಗಿದ್ದಾಗ ಪೂರ್ಣ ಪ್ರಮಾಣದ ಅವಧಿ ಪೂರೈಸಲು ಅವರು ಕಾರಣ ಎಂದರು.


ಸಂಬಂಧಿತ ಟ್ಯಾಗ್ಗಳು

N. Y. Gopalakrishna BJP ಉಪ ಸಭಾಧ್ಯಕ್ಷ ಪ್ರಧಾನಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ