'ಕೆಲಸ ಮಾಡಿದವರಿಗೆ ಕೂಲಿ ಕೊಡಬೇಕಲ್ವಾ'-ಸಿಎಂ

siddaramaiah road show at madegowdanahundi

19-04-2018

ಮೈಸೂರು: ವರುಣಾ ಕ್ಷೇತ್ರದಲ್ಲಿ ಪುತ್ರನ ಪರ ಪ್ರಚಾರ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಇಂದು ಭರ್ಜರಿ ರೋಡ್ ಶೋ ನಡೆಸುವ ಮೂಲಕ ಮತಯಾಚಿಸಿದ್ದಾರೆ. ಮಾದೇಗೌಡನಹುಂಡಿಯಲ್ಲಿ ಸಿಎಂಗೆ ಅದ್ಧೂರಿ ಸ್ವಾಗತ ಸಿಕ್ಕಿದ್ದು, 800 ಕೆ.ಜಿ ತೂಕದ 3 ಸಾವಿರ ಸೇಬಿನ ಹಣ್ಣಿನ ಹಾರ ಹಾಕಿ ಸಿಎಂ ಅವರನ್ನು ಸ್ವಾಗತಿಸಿದ್ದಾರೆ.

ಎಪಿಎಂಸಿ ಸದಸ್ಯ ನರಸಯ್ಯ ಗೌಡರ ಮಗ ಅನಿಲ್ 800 ಕೆ.ಜಿ ತೂಕದ ಸೇಬಿನ ಹಣ್ಣಿನ ಹಾರ ನೀಡಿದ್ದಾರೆ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ. ಎಂದಿಗೂ ಹಳ್ಳಿಯಲ್ಲಿ ಇಂತಹ ಅದ್ಧೂರಿ ಸ್ವಾಗತ ಸಿಕ್ಕಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಯತೀಂದ್ರ ವೃತ್ತಿಯಲ್ಲಿ ವೈದ್ಯ, ಒಂದೂವರೆ ವರ್ಷದಿಂದ ರಾಜಕೀಯಕ್ಕೆ ಬಂದಿದ್ದಾನೆ. ಮೊದಲ ಮಗ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾನೆ. ನಿಮ್ಮೆಲ್ಲರ ಆಶಿರ್ವಾದ ಯತೀಂದ್ರ ಮೇಲೆ ಇರಲಿ. ಮತ್ತೆ ನಾವೇ ಅಧಿಕಾರಕ್ಕೆ ಬರೋದು ಎಂದು ವಿಶ್ವಾಸದ ಮಾತುಗಳನ್ನಾಡಿದರು. ಯಾರ್ಯಾರೋ ಬಂದು ಪ್ರಚಾರ ಮಾಡ್ತಾರೆ ಅವರಿಗೆಲ್ಲಾ ಮತ ಹಾಕಬೇಡಿ. ಬಿಜೆಪಿಯಾಗಲೀ, ಜೆಡಿಎಸ್ ಆಗಲೀ ರಾಜ್ಯದಲ್ಲಿ ಅಧಿಕಾರಕ್ಕೆ ಬರಲ್ಲ. ಅಭಿವೃದ್ಧಿ ಮಾಡದೇ ಇರುವವರಿಗೆ ನೀವು ಓಟ್ ಹಾಕ್ತೀರಾ? ಕೆಲಸ ಮಾಡಿದವರಿಗೆ ಕೂಲಿ ಕೊಡಬೇಕಲ್ವಾ, ಎಂದು ಯತೀಂದ್ರಗೆ ಮತ ನೀಡಿ ಎಂದು ಸಿಎಂ ಮನವಿ ಮಾಡಿದರು.


ಸಂಬಂಧಿತ ಟ್ಯಾಗ್ಗಳು

siddaramaiah campain ಯತೀಂದ್ರ ಮರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ