ಬಿ.ಎಸ್.ಯಡಿಯೂರಪ್ಪ ನಾಮಪತ್ರ ಸಲ್ಲಿಕೆ

B.S.yeddyurappa filed nomination at shikaripura

19-04-2018

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ತಮ್ಮ ಸ್ವಕ್ಷೇತ್ರ ಶಿಕಾರಿಪುರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.  ಮೊದಲಿಗೆ ತಮ್ಮ ಇಷ್ಟದೈವ ಉಚ್ಚಂಗಿ ಸ್ವಾಮಿಯ ದರ್ಶನಾಶೀರ್ವಾದಗಳನ್ನು ಪಡೆದ ಅವರು ದೇವಸ್ಥಾನದಿಂದ ಸಂತೆ ಮೈದಾನದ ವರೆಗೆ ರೋಡ್ ಶೋ ನಡೆಸಿ ಸಾರ್ವಜನಿಕರಲ್ಲಿ ಮತಯಾಚಿಸಿದರು.

ಹೊಸ ಸಂತೆ ಮೈದಾನದಲ್ಲಿ  ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ಈ ಬಾರಿ ನೀವು ಆರಿಸುತ್ತಿರುವುದು ಕೇವಲ ಒಬ್ಬ ಬಿಜೆಪಿ ಶಾಸಕನನ್ನಲ್ಲ. ಆದರೆ, ರಾಜ್ಯದ ಭಾವಿ ಮುಖ್ಯಮಂತ್ರಿಯನ್ನು ಎಂದು ಹೇಳಿದ ಅವರ ಭಾಷಣಕ್ಕೆ ಸಾರ್ವಜನಿಕರು ಕರತಾಡನಗಳ ಮೂಲಕ ಬೆಂಬಲ ಸೂಚಿಸಿದರು. ನಂತರ ಚುನಾವಣಾ ಅಧಿಕಾರಿಯ ಕಚೇರಿಗೆ ತೆರಳಿ ತಮ್ಮ ನಾಮಪತ್ರ ಸಲ್ಲಿಸಿದರು. ಛತ್ತೀಸ್ ಗಡದ ಮುಖ್ಯಮಂತ್ರಿ ರಮಣ್ ಸಿಂಗ್, ಕೇಂದ್ರ ಸಚಿವರಾದ ಅನಂತ್ ಕುಮಾರ್, ಸಂಸದ ಶ್ರೀರಾಮುಲು ಮುಂತಾದವರು ಈ ಸಂದರ್ಭದಲ್ಲಿ ಯಡಿಯೂರಪ್ಪನವರ ಜೊತೆಗಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ