ಕೊಲೆಗಡುಕರಿಬ್ಬರ ಬಂಧನ

auto driver Murder: 2 accused arrested

19-04-2018

ಬೆಂಗಳೂರು: ಕಾಮಾಕ್ಷಿ ಪಾಳ್ಯದ ಸಣ್ಣಕ್ಕಿ ಬಯಲಿನ ತೋಟದ ರಸ್ತೆಯಲ್ಲಿ ನಡೆದಿದ್ದ ಆಟೋ ಚಾಲಕ ಕೋಟೇಶ್ವರ ರಾವ್‍ನನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆಗೈದ  ಪ್ರಕರಣವನ್ನು ಬೇಧಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಮಲಾನಗರದ ಶರತ್ ಅಲಿಯಾಸ್ ಸುರೇಶ್ (22) ಹಾಗೂ ಶಿವನಹಳ್ಳಿಯ ವಿನಯ್ (24) ಬಂಧಿತ ಆರೋಪಿಗಳಾಗಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿರುವ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ರವಿ ಚೆನ್ನಣ್ಣನವರ್ ತಿಳಿಸಿದ್ದಾರೆ.

ಆರೋಪಿಗಳು ರಾತ್ರಿ ವೇಳೆ ಆಟೋ ಓಡಿಸುವ ವಿಚಾರಕ್ಕೆ ಜಗಳ ಮಾಡಿಕೊಂಡು ಕೋಟೇಶ್ವರ ರಾವ್‍ನನ್ನು ಕಳೆದ ಏ.12ರಂದು ಮುಂಜಾನೆ ತೋಟದ ರಸ್ತೆಗೆ ಕರೆಸಿಕೊಂಡು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾಮಾಕ್ಷಿಪಾಳ್ಯ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

auto driver murder ಕೊಲೆ ಜಗಳ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ