ಮಾಜಿ ಸಂಸದೆ ರಮ್ಯಾ ವಿರುದ್ದ ಬಿಜೆಪಿ ಕಾರ್ಯಕರ್ತರಿಂದ ವ್ಯಂಗ್ಯ

Kannada News

18-05-2017

ಮಂಡ್ಯ :  ಮಾಜಿ ಸಂಸದೆ ರಮ್ಯಾ ಕಾಂಗ್ರೆಸ್ ನ ಸೋಶಿಯಲ್ ಮೀಡಿಯಾ ಮುಖ್ಯಸ್ಥರಾಗಿದ್ದಕ್ಕೆ ಮಕ್ಕಳು ತಿನ್ನುವ ಲಾಲಿಪಪ್, ಕಿಂಡರ್ ಜಾಯ್, ಲೈಸ್ ಗಳನ್ನ ಪಾರ್ಸಲ್ ಕಳುಹಿಸುವ ಮುಖಾಂತರ ಮಂಡ್ಯದ ಬಿಜೆಪಿ ಕಾರ್ಯಕರ್ತರು ರಮ್ಯಾ ವಿರುದ್ದ ವ್ಯಂಗ್ಯವಾಡಿದ್ದಾರೆ. ಇಂದು ನಗರದ ವಿವಿ ರಸ್ತೆಯಲ್ಲಿರುವ ಪೋಸ್ಟ್‌ ಆಫೀಸ್ ಬಳಿ ಆಗಮಿಸಿದ ಬಿಜೆಪಿ ಕಾರ್ಯಕರ್ತರು. ರಮ್ಯಾ ಮಕ್ಕಳ ಹಾಗೆ ವರ್ತಿಸ್ತಿದ್ದಾರೆ. ಅವರಿಗೆ ಲೋಕ ಜ್ಞಾನ ಕಡಿಮೆ ಹಿಗಾಗಿ ಅವ್ರಿಗೆ ಲಾಲಿಪಪ್, ಕಿಂಡರ್ ಜಾಯ್, ಲೈಸ್ ಅನ್ ಕಳುಹಿಸುತ್ತಿರೋದಾಗಿ ಹೇಳಿದ್ರು. ಇನ್ನು ರಮ್ಯಾ ಮೋದಿ ಅವ್ರ ಸರ್ಕಾರದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ ಅಂತ ಹೇಳಿಕೆ ನೀಡಿದ್ದಾರೆ. ಆದ್ರೆ ನಿಜವಾಗಿ ಹೆಣ್ಣು ಮಕ್ಕಳಿಗೆ ರಕ್ಷಣೆ ಸಿಗದಿರುವುದು ರಾಜ್ಯದ ಸಿದ್ದರಾಮಯ್ಯ ಸರ್ಕಾರದಲ್ಲಿ ಅಂತ ಗುಡುಗಿದ್ರು. ಇನ್ನು ಸೋಶಿಯಲ್ ಮೀಡಿಯಾ ಮುಖ್ಯಸ್ತೆಯಾಗಿರೋ ರಮ್ಯಾ ಅದ್ರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯಕ್ಕೆ ತೆರಳುವಂತೆ ವ್ಯಂಗ್ಯವಾಡಿದ್ರು..

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ