ಚುನಾವಣಾಧಿಕಾರಿಗಳೊಂದಿಗೆ ಡಿಸಿ ಮಾರುವೇಷದಲ್ಲಿ ಕಾರ್ಯಾಚರಣೆ

Examination of election officials in disguise at check posts and

19-04-2018

ಬೆಂಗಳೂರು: ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಲ್ಲಿ ನಿಗಾವಹಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಾಲಯ್ಯ ಅವರು ಕೇಂದ್ರದಿಂದ ಬಂದಿದ್ದ ವೀಕ್ಷಕರ ಜೊತೆ ನಿನ್ನೆ ರಾತ್ರಿ ಮಾರುವೇಷದಲ್ಲಿ ಪರಿಶೀಲನೆ ನಡೆಸಿದ್ದಾರೆ. ಕೇಂದ್ರದಿಂದ ಬಂದಿದ್ದ ಚುನಾವಣಾ ವೀಕ್ಷಕರ ಜೊತೆ ಪಾಲಯ್ಯ ಅವರು ಬರ್ಮುಡಾ ನಿಕ್ಕರ್, ಟೀ ಶರ್ಟ್ ಧರಿಸಿ ಪರಿಶೀಲನೆ ನಡೆಸಿದ್ದು, ಚೆಕ್ ಪೋಸ್ಟ್ ಅಧಿಕಾರಿಗಳ ನಿದ್ದೆಗೆಡಿಸಿದ್ದಾರೆ.

ಸಾಮಾನ್ಯ ಪ್ರಯಾಣಿಕರಂತೆ ವೇಷ ಧರಿಸಿ ಖಾಸಗಿ ಬಸ್‍ಗಳ ಪರಿಶೀಲನೆ ನಡೆಸಿದ್ದು, ಖಾಸಗಿ ಇನ್ನೋವಾ ಕಾರಿನಲ್ಲಿ ಬೆಂಗಾವಲು ಸಿಬ್ಬಂದಿ ಇಲ್ಲದೆ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ, ದೊಡ್ಡಬಳ್ಳಾಪುರ, ಯಲಹಂಕ ವಿಭಾಗದಲ್ಲಿ ಇಡೀ ರಾತ್ರಿ ಅಧಿಕಾರಿಗಳು ಸಂಚರಿಸಿದ್ದು, 2 ಕಡೆ ದಾಖಲೆ ಇಲ್ಲದೆ ನಗದು ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.


ಸಂಬಂಧಿತ ಟ್ಯಾಗ್ಗಳು

check post election officer ಪ್ರಯಾಣಿಕ ಮಾರುವೇಷ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ