ನಿರ್ಮಾಪಕನ ತಂಗಿ ಮಗನ ಕೊಲೆ: ಇಬ್ಬರ ಬಂಧನ

cinema producer sister

19-04-2018

ಬೆಂಗಳೂರು: ಅಂಜನಿಪುತ್ರ ಸೇರಿ ಹಲವು ಕನ್ನಡ ಸಿನೆಮಾಗಳ ನಿರ್ಮಾಪಕ ಹಾಗೂ ವಿತರಕ ಕುಮಾರ್ ತಂಗಿ ಮಗ(ಆಳಿಯ)ನನ್ನು ಕೊಲೆಗೈದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬ್ಯಾಟರಾಯನಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಗಂಗೊಂಡನಹಳ್ಳಿಯ ಸದ್ದಾಂ ಹುಸೇನ್(21) ಹಾಗೂ ಮಹಮದ್ ಶಫಿ(20) ಬಂಧಿತ ಆರೋಪಿಗಳಾಗಿದ್ದಾರೆ. ಕುಮಾರ್ ತಂಗಿ ಮಗ ರಾಹುಲ್(21) ಕಳೆದ ಏಪ್ರಿಲ್ 13ರಂದು ರಾತ್ರಿ ನಾಯಂಡಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಮೊಬೈಲ್‍ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಆರೋಪಿಗಳು ಮೊಬೈಲ್ ಕಸಿದುಕೊಳ್ಳಲು ಮುಂದಾಗಿದ್ದರು.

ಮೊಬೈಲ್ ಗಟ್ಟಿಯಾಗಿ ಹಿಡಿದುಕೊಂಡ ರಾಹುಲ್ ಆರೋಪಿಯೊಬ್ಬನ ಮೇಲೆ ಹಲ್ಲೆ ಮಾಡಿದ್ದು ಇದರಿಂದ ರೊಚ್ಚಿಗೆದ್ದ ಇಬ್ಬರು ರಾಹುಲ್ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಮೊಬೈಲ್ ಕಸಿದು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಾಹುಲ್ ಮೊಬೈಲ್ ಟವರ್ ಲೊಕೇಷನ್ ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ .ಬಂಧಿತ  ಆರೋಪಿಗಳು ಚಂದ್ರಾ ಲೇಔಟ್ ಹಾಗೂ ವಿಜಯನಗರದಲ್ಲಿ ಡಕಾಯತಿ ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದ್ದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ರವಿ ಚೆನ್ನಣ್ಣವರ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

murder arrested ಮೊಬೈಲ್ ಟವರ್ ಲೊಕೇಷನ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ