ದಾಖಲೆ ಇಲ್ಲದೆ ಸಾಗಿಸುತ್ತಿದ್ದ 52 ಲಕ್ಷ ನಗದು ವಶ

police seized 52 lakhs of rupees in a bus

19-04-2018

ಬೆಂಗಳೂರು: ದೇವನಹಳ್ಳಿ ಚೆಕ್‍ ಪೋಸ್ಟ್ ಬಳಿ ಬುಧವಾರ ರಾತ್ರಿ ಚಿಕ್ಕಬಳ್ಳಾಪುರ ಕಡೆಯಿಂದ ನಗರದ ಕಡೆಗೆ ಬರುತ್ತಿದ್ದ ಖಾಸಗಿ ಬಸ್‍ನಲ್ಲಿ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ 52 ಲಕ್ಷ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದೇವನಹಳ್ಳಿಯ ರಾಣಿವೃತ್ತದ ಚೆಕ್‍ ಪೋಸ್ಟ್ ಬಳಿ ರಾತ್ರಿ 10.30ರ ವೇಳೆ ಹೈದಾರಾಬಾದ್‍ನಿಂದ ತಿರುವನಂತಪುರ ಕಡೆ ಹೋಗುತ್ತಿದ್ದ ಖಾಸಗಿ ಕೆಪಿಎನ್ ಬಸ್‍ನ್ನು ತಡೆದು ತಪಾಸಣೆ ನಡೆಸಿದಾಗ ಸೂಟ್‍ ಕೇಸ್ ಒಂದರಲ್ಲಿ 52ಲಕ್ಷ ನಗದು ಇರುವುದು ಪತ್ತೆಯಾಗಿದೆ.

ಸೂಟ್‍ ಕೇಸ್‍ನ್ನು ಶಿವಕಾಶಿಯ ಕಾರ್ತಿಕೇಯನ್ ಹಾಗೂ ಅವರ ಪುತ್ರ ವೆಂಕಟೇಶ್ವರಲು ತೆಗೆದುಕೊಂಡು ಹೋಗುತ್ತಿದ್ದು, ಅವರಿಬ್ಬರನ್ನು ವಿಚಾರಣೆ ನಡೆಸಿದಾಗ ಲಗ್ನಪತ್ರಿಕೆಯ ಸಗಟು ವ್ಯಾಪಾರಿಗಳಾಗಿದ್ದು, ಲಗ್ನಪತ್ರಿಕೆಗಳನ್ನು ಚಿಲ್ಲರೆ ವ್ಯಾಪಾರಿಗಳಿಗೆ ಪೂರೈಕೆ ಮಾಡಿ ಬಂದ ಹಣವನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ, ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿಗಳನ್ನು ನೀಡದಿರುವುದರಿಂದ ಹಣವನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

money seized ವ್ಯಾಪಾರಿ ಸೂಟ್‍ ಕೇಸ್‍


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ