‘25ಸ್ಥಾನ ಗೆಲ್ಲಲಾಗದವರು ಸಿಎಂ ಕನಸು ಕಾಣುತ್ತಿದ್ದಾರೆ’-ಸಿಎಂ

siddaramaiah election campaign in varuna for his son yathindra

19-04-2018

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವರುಣಾ ವಿಧಾನಸಭೆ ಕ್ಷೇತ್ರದ ಮೆಲ್ಲಹಳ್ಳಿಯಿಂದ ತಮ್ಮ ಚುನಾವಣಾ ಪ್ರಚಾರ ಆರಂಭಿಸಿದರು. ಪುತ್ರ ಡಾ.ಯತೀಂದ್ರ ಅವರ ಪರವಾಗಿ ಪ್ರಚಾರಕ್ಕೆ ಆಗಮಿಸಿದ ಮುಖ್ಯಮಂತ್ರಿಯವರನ್ನು ಗ್ರಾಮಸ್ಥರು ಪಟಾಕಿ ಸಿಡಿಸಿ, ಜಯಘೋಷ ಮೊಳಗಿಸುವ ಮೂಲಕ ಬರ ಮಾಡಿಕೊಂಡರು. ಗ್ರಾಮದಲ್ಲಿ ರೋಡ್ ಶೋ ನಡೆಸಿದ ಮುಖ್ಯಮಂತ್ರಿಯವರು, ನನಗೆ 40 ವರ್ಷಗಳ ಸಂಬಂಧ ಇರುವ ಊರು ಇದು. ತಾಲ್ಲೂಕು ಬೋರ್ಡ್ ಸದಸ್ಯ ಆಗಿದ್ದಾಗಿನಿಂದ ಈ ಗ್ರಾಮದ ಸಂಪರ್ಕ ಇದೆ ಎಂದರು.

ನಾನು ಮತ್ತು ಈ ಗ್ರಾಮದ ಜನರು ಒಂದೇ ಕುಟುಂಬದ ಸದಸ್ಯರಂತೆ. ನನಗೆ 70 ವರ್ಷ. ಹೀಗಾಗಿ ಇದೇ ನನಗೆ ಕೊನೆಯ ಚುನಾವಣೆ. ಮೊದಲ ಚುನಾವಣೆಯನ್ನು ಚಾಮುಂಡೇಶ್ವರಿ ಕ್ಷೇತ್ರದಿಂದ ಎದುರಿಸಿದ್ದೆ. ಕೊನೆಯ ಚುನಾವಣೆಯನ್ನೂ ಅಲ್ಲಿಂದಲೇ ಎದುರಿಸುತ್ತೇನೆ.

ನಾನು ಮುಖ್ಯಮಂತ್ರಿ ಆಗಲು ಈ ಗ್ರಾಮಸ್ಥರ ಕೊಡುಗೆ ಇದೆ. ಯತೀಂದ್ರ ಅವರಿಗೂ ನೀವು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು. 25 ಸ್ಥಾನಗಳನ್ನೂ ಗೆಲ್ಲಲು ಆಗದವರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ನಾನು ನಿಮಗೆ ಗೌರವ ತರುವ ಕೆಲಸ ಮಾಡಿದ್ದೇನೆಯೇ ಹೊರತು ಹಗರಣ, ಭ್ರಷ್ಟಾಚಾರ ಮಾಡಿಲ್ಲ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಎಲ್ಲ ಸಮುದಾಯಗಳಿಗೆ ಒಳಿತಾಗುವ ಕಾರ್ಯಕ್ರಮಗಳನ್ನು ಕೊಟ್ಟಿದೆ. ನಾವು ಸದಾ ಸಾಮಾಜಿಕ ನ್ಯಾಯದ ಪರ. ಹೀಗಾಗಿ ಹಲವಾರು ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದರು.


ಸಂಬಂಧಿತ ಟ್ಯಾಗ್ಗಳು

siddaramaiah dr yathindra ಜನೋಪಯೋಗಿ ಕನಸು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ