ನೋ ಕ್ಯಾಷ್ ವಿರುದ್ಧ ತಿಥಿ ಪ್ರತಿಭಟನೆ

Different protest against no cash at kalburgi

19-04-2018

ಕಲಬುರಗಿ: ಎಟಿಎಂಗಳ ಮುಂದೆ ನೋ ಕ್ಯಾಷ್ ಎಂಬ ಬೋರ್ಡಿನಿಂದ ಕಂಗೆಟ್ಟಿರುವ ಸಾರ್ವಜನಿಕರು ಕಲಬುರಗಿಯಲ್ಲಿ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಎ.ಟಿ.ಎಂ ಹಾಗೂ ಬ್ಯಾಂಕ್ಗಳ ತಿಥಿ ಮಾಡಿ ಬ್ಯಾಂಕಿಂಗ್ ವ್ಯವಸ್ಥೆ ಹದಗೆಟ್ಟಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಬಹುತೇಕ ಎಟಿಎಂಗಳ ಮುಂದೆ ನೋ ಕ್ಯಾಷ್ ಬೋರ್ಡ್ ನೇತಾಡುತ್ತಿದೆ, ಜನಸಾಮಾನ್ಯರ ಪಾಡು ಹೇಳತೀರದಾಗಿದೆ ಎಂದು ಅಸಮಧಾನ ಹೊರಹಾಕಿದ್ದಾರೆ. ನಗರದ ಸರ್ದಾರ್ ಪಟೇಲ್ ವೃತ್ತದ ಬಳಿ ಸಾರ್ವಜನಿಕರಿಗೆ ಊಟ ಹಾಕಿಸಿದ್ದು, ಬ್ಯಾಂಕ್, ಎಟಿಎಂ ಹಾಗೂ ಆರ್. ಬಿ.ಐ ಸತ್ತಿದೆ ಎಂದು ತಿಥಿ ಊಟ ನೀಡುತ್ತಿರುವುದಾಗಿ ಹೇಳುತ್ತಾ ಪ್ರತಿಭಟಿಸಿದ್ದಾರೆ. ನೋಟು ಅಮಾನ್ಯಕೀರಣದ ದುಷ್ಪರಿಣಾಮದಿಂದ ಹಣಕ್ಕಾಗಿ ಪರದಾಡುಂತಾಗಿದೆ ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.


ಸಂಬಂಧಿತ ಟ್ಯಾಗ್ಗಳು

no cash ATM ದುಷ್ಪರಿಣಾಮ ಜನಸಾಮಾನ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ