ಜೆಡಿಎಸ್ ಅಭ್ಯರ್ಥಿ ವಿರುದ್ಧ ದೇವೇಗೌಡರ ಮನೆಯಲ್ಲೇ ಪಿತೂರಿ?

Conspiracy at Deve Gowda

19-04-2018

ಬೆಂಗಳೂರು: ಕೆ.ಆರ್.ನಗರ ಜಾತ್ಯತೀತ ಜನತಾದಳದ ಅಭ್ಯರ್ಥಿ ಸಾ.ರಾ.ಮಹೇಶ್ ರನ್ನು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಲು ಆ ಪಕ್ಷದ ಅಧ್ಯಕ್ಷ ಎಚ್.ಡಿ.ದೇವೇಗೌಡರ ಮನೆಯಲ್ಲೇ ಸ್ಕೆಚ್ ರೂಪಿಸಲಾಗಿದೆಯೇ? ಅಂತಹ ಅನುಮಾನ ಮೂಡುವ ವಿಡಿಯೋ ಒಂದು ವೈರಲ್ ಆಗಿದೆ.

ದೇವೇಗೌಡರ ಸೊಸೆ ಅಂದರೆ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ, ಅವರ ತವರು ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮ. ಅಲ್ಲಿನ ತಮ್ಮ ಮನೆಯಲ್ಲಿ ಭವಾನಿ ರೇವಣ್ಣ ಅವರು ಸ್ಥಳೀಯ ಒಕ್ಕಲಿಗ ಮುಖಂಡರ ಸಭೆ ನಡೆಸಿದ್ದು, ಆ ಸಭೆಯಲ್ಲಿ "ಅವರು ಇನ್ನೂ ಅಭ್ಯರ್ಥಿ, ಈಗಾಗಲೇ ಅಪ್ಪ-ಮಕ್ಕಳ ದೌರ್ಜನ್ಯ ತಡೆದುಕೊಳ್ಳಲಾಗುತ್ತಿಲ್ಲ. ಇನ್ನೂ, ಅವರು ಶಾಸಕರಾಗಿ ಸಚಿವರಾದರೆ ಇನ್ನಷ್ಟು ದೌರ್ಜನ್ಯ ನಡೆಸಬಹುದು."ಅಂಜಿಕೆ ಬೇಡ. ನನ್ನ ಹೆಸರು ಹೇಳಿ ಕೊಂಡೇ  ಓಪನ್ ಆಗಿ ಮಾಡಿ. ಧೈರ್ಯವಾಗಿ ಹೇಳುತ್ತಿದ್ದೇನೆ. ಈ ತಾಲ್ಲೂಕು ಕಾಪಾಡುವ ಜವಾಬ್ದಾರಿ ನನ್ನದು" ಎನ್ನುವ ಮಾತುಗಳು ಕೇಳಿ ಬರುತ್ತವೆ.

ಅದಕ್ಕೆ ಪ್ರತಿಯಾಗಿ ವ್ಯಕ್ತಿಯೊಬ್ಬರು "ಗೌಡರ ಮನೆ ಪರ್ಮಿಷನ್ ಸಿಕ್ಕಿತಲ್ಲ ,ಆಯ್ತು ಬಿಡಿ "ಎನ್ನುವ ಮಾತುಗಳು ಕೇಳಿ ಬರುತ್ತವೆ. ಈ ವಿಡಿಯೋ ಈಗ ವೈರಲ್ ಆಗಿದೆ.

ಸಾ.ರಾ.ಮಹೇಶ್ ಎರಡು ಬಾರಿ ಶಾಸಕರಾಗಿ ಈ ಬಾರಿ ಮತ್ತೆ ಕಣಕ್ಕಿಳಿದಿರುವ ವಿಧಾನ ಸಭಾ ಕ್ಷೇತ್ರ ಕೆ.ಆರ್.ನಗರ. ಇದರ ವ್ಯಾಪ್ತಿಯಲ್ಲಿ ಸಾಲಿಗ್ರಾಮ ಎಂಬ ಗ್ರಾಮ ಇದ್ದು, ಅದು ದೇವೇಗೌಡರ ಪುತ್ರ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ಅವರ ತವರು. ಭವಾನಿ ಹಾಲಿ ಹಾಸನ ಜಿಲ್ಲೆಯ ಮೇಲುಕೋಟೆ ಜಿಲ್ಲಾಪಂಚಾಯಿತಿ ಸದಸ್ಯೆ. ಭವಾನಿ ರೇವಣ್ಣ, 2004ರ ವಿಧಾನಸಭಾ ಚುನಾವಣೆಗೆ ಕೆ.ಆರ್.ನಗರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿದ್ದರು. ಅದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನೂ ನಡೆಸಿದ್ದರು. ಅವರ ಪುತ್ರ ಪ್ರಜ್ವಲ್ ಈ ಬಾರಿ ಕೆ.ಆರ್.ನಗರ ಕ್ಷೇತ್ರದಿಂದ  ಕಣಕ್ಕಿಳಿಯಲು ಪ್ರಯತ್ನಿಸಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ