ಹೆಣ್ಣು ಬಾಕನ ‘ಸಿಡಿ’ ಟಿಕೆಟ್ ತಪ್ಪಿಸಿದೆ: ಬೇಳೂರು

Belur gopalakrishna serious allegation on shikaripura bjp leaders

19-04-2018

ಬೆಂಗಳೂರು: ಸಾಗರ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸರ್ಧಿಸುವ ಮಹದಾಸೆಯಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದ ಬೇಳೂರು ಗೋಪಾಲಕೃಷ್ಣ, "ಶಿಕಾರಿಪುರದ ಹೆಣ್ಣುಬಾಕನೊಬ್ಬನ 'ಸಿಡಿ'ಯೊಂದು ತಮಗೆ ಟಿಕೆಟ್ ತಪ್ಪಿಸಿದಂತಿದೆ " ಎಂದು ಗಂಭೀರ ಆರೋಪ ಮಾಡಿದ್ದಾರೆ. ನಾನು ಕಳೆದ ಐದು ವರ್ಷಗಳಿಂದ ಸಾಗರದಲ್ಲಿ ಬಿಜೆಪಿ ಪಕ್ಷ ಕಟ್ಟಿದ್ದೆ. ಎಲ್ಲಾ ಚುನಾವಣಾ ಸಮೀಕ್ಷೆಗಳೂ ನನ್ನ ಪರವಾಗಿಯೇ ಇದ್ದವು. ಆದರೆ, ನನ್ನನ್ನು ಬಿಟ್ಟು ಭ್ರಷ್ಟಾಚಾರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ ಎಂದು ಗೋಪಾಲಕೃಷ್ಣ ದೂರಿದ್ದಾರೆ.

ಶಿಕಾರಿಪುರದಲ್ಲಿ ಒಬ್ಬ ಹೆಣ್ಣು ಬಾಕ ಇದ್ದಾನೆ. ಅವನ 'ಸಿಡಿ' ಏನಾದರೂ ಬಿಜೆಪಿ ಟಿಕೆಟ್ ಪಡೆದಿರುವ ಹಾಲಪ್ಪಗೆ ಸಿಕ್ಕಿರಬೇಕು. ಅದನ್ನು ಇಟ್ಟುಕೊಂಡು ಆಟ ಆಡುತ್ತಿದ್ದಾನೆ ಎಂದೂ ಹೇಳಿದ್ದಾರೆ. ಬಿ.ಎಸ್.ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಹಾಗೂ ಬಿ.ವೈ.ರಾಘವೇಂದ್ರ ಅವರೇ ತಮಗೆ ಟಿಕೆಟ್ ತಪ್ಪಲು ಕಾರಣ ಎಂದೂ ಆರೋಪಿಸಿದ್ದಾರೆ. ಜಾತ್ಯತೀತ ಜನತಾದಳದಿಂದ ತಮಗೆ ಆಹ್ವಾನ ಬಂದಿದೆ. ಮಾತುಕತೆ ನಡೆದಿದೆ. ಆದರೆ, ನಾನು ಪಕ್ಷೇತರನಾಗಿ ಚುನಾವಣೆಗೆ ಸ್ಪರ್ಧಿಸುವೆ ಎಂದು ಬೇಳೂರು ಗೋಪಾಲಕೃಷ್ಣ ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

Belur gopalakrishna Shikaripura ಜಾತ್ಯತೀತ ಹೆಣ್ಣು ಬಾಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ