ಶಾಸಕ ಸಂಜಯ್ ಪಾಟೀಲ್ ವಿವಾದಾತ್ಮಕ ಹೇಳಿಕೆ

controversial statement of sanjay patil

19-04-2018

ಬೆಳಗಾವಿ: ಜಿಲ್ಲೆಯ ಗ್ರಾಮೀಣ ಕ್ಷೇತ್ರದ ಶಾಸಕ ಸಂಜಯ ಪಾಟೀಲ್, ಚುನಾವಣೆ ಪ್ರಚಾರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸುಳೇಭಾವಿ ಚುನಾವಣೆ ಪ್ರಚಾರದಲ್ಲಿ ಮಾತಿಗಿಳಿದ ಶಾಸಕ, ಇದು ಹಿಂದು ರಾಷ್ಟ್ರ ರಾಮ ಮಂದಿರ ನಿರ್ಮಾಣ ಆಗಬೇಕು, ಇದಕ್ಕಾಗಿ ಯಾವ ತ್ಯಾಗಕ್ಕೂ ನಾನು ಸಿದ್ಧ. ರಾಮ ಮಂದಿರ ನಿರ್ಮಾಣ ಕಟ್ಟಲು ಬದ್ಧ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೆಳಲಿ ನಾವೆಲ್ಲರು ಮತ ಹಾಕೋಣ. ಆದರೆ, ಲಕ್ಷ್ಮೀ ಹೆಬ್ಬಾಳ್ಕರ್ ಹೀಗೆ ಹೆಳಲು ಸಾಧ್ಯವಿಲ್ಲ. ಅವರು ಬಾಬಾರಿ ಮಸೀದಿ ನಿರ್ಮಿಸುವವರು. ನಾವು ರಾಮ ಮಂದಿರ ನಿರ್ಮಾಣ ಮಾಡುವವರು ಎಂದು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ.

ಈ ಚುನಾವಣೆ ರಸ್ತೆ, ಚರಂಡಿ, ಕುಡಿಯುವ ನೀರಿಗಾಗಿ ಇಲ್ಲ. ಈ ಚುನಾವಣೆ ಹಿಂದು, ಮುಸ್ಲಿಂ ಧರ್ಮದ ಬಗ್ಗೆ ಇದೆ. ಯಾರಿಗೆ ಬಾಬಾರಿ ಮಸೀದಿ, ಟಿಪ್ಪು ಜಯಂತಿ ಮಾಡೋದು ಇದೆ ಅವರೆಲ್ಲರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲಿ. ಶಿವಾಜಿ ಮಹರಾಜರು ಬೇಕಿದ್ದರೆ ಬಿಜೆಪಿ ಬೆಂಬಲಿಸಿ. ಎಂಬ ವಿವಾದಾತ್ಮಕ ಹೇಳಿಕೆ ಇದೀಗ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ