18 ಸಾವಿರ ಭಿತ್ತಿ ಪತ್ರಗಳು ಜಪ್ತಿ

police seized 18 thousand posters

19-04-2018

ಕಲಬುರಗಿ:  ಜೇವರ್ಗಿ ಶಾಸಕ ಅಜಯಸಿಂಗ್ ಹಾಗೂ ದಿ ಎನ್ ಧರ್ಮಸಿಂಗ್ ಅವರ ಭಾವಚಿತ್ರವುಳ್ಳ ಭಿತ್ತಿಪತ್ರಗಳನ್ನು ಜಪ್ತಿ ಮಾಡಲಾಗಿದೆ. ಸೊಲ್ಲಾಪುರದಿಂದ ಜೇವರ್ಗಿಗೆ ತರಲಾಗುತ್ತಿದ್ದ ಸುಮಾರು 18 ಸಾವಿರ ಭಿತ್ತಿಪತ್ರಗಳನ್ನು ಅಫಜಲಪುರ ತಾಲ್ಲೂಕಿನ ಬಳ್ಳುರ್ಗಿ ಚೆಕ್ ಪೋಸ್ಟ್ ಬಳಿ ತಪಾಸಣೆ ವೇಳೆ ಪತ್ತೆಯಾಗಿವೆ. ಮುದ್ರಣದ ಅನುಮತಿ ಮತ್ತು ಅಗತ್ಯ ದಾಖಲೆ ಇಲ್ಲದ ಕಾರಣ ಭಿತ್ತಿಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

ಭಿತ್ತಿಪತ್ರ ಅಫಜಲಪುರ ajaya sing N. Dharam Singh


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ