ಜನಾರ್ದನ ಪೂಜಾರಿ ಆಶೀರ್ವಾದ ಪಡೆದ ರೈ

Ramanath Rai met Janardhan Poojari

18-04-2018

ಬೆಂಗಳೂರು: ಸಚಿವ ರಮಾನಾಥ ರೈ  ಬಂಟ್ವಾಳ ವಿಧಾನ ಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸ ಬಯಸಿದ್ದು, ನಾಮಪತ್ರ ಸಲ್ಲಿಸುವುದಕ್ಕೆ ಪೂರ್ವಭಾವಿಯಾಗಿ ಇಂದು ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರ ನಿವಾಸಕ್ಕೆ ತೆರಳಿ ಅವರ ಆಶೀರ್ವಾದ ಪಡೆದರು.

ಈ ಸುದ್ದಿಯ ಮಹತ್ವ ಏನೆಂದರೆ, ಕೆಲ ತಿಂಗಳ ಹಿಂದೆ ಜನಾರ್ದನ ಪೂಜಾರಿ ಅವರು, ರಮಾನಾಥ ರೈ ತಮ್ಮ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ ಎಂದು ಅನೇಕ ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಕಣ್ಣೀರು ಹಾಕಿದ್ದರು. ಈಗ, ಗುರು-ಶಿಷ್ಯರ ನಡುವೆ ಸಂಬಂಧ ಸರಿಯಾಗಿರುವುದನ್ನು ಈ ಘಟನೆ ಬಹಿರಂಗ ಪಡಿಸಿದೆ. ಈ ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಳಿವೇ ಇಲ್ಲ, ಜಿಲ್ಲೆಯಲ್ಲಿ ಎಲ್ಲ ಸ್ಥಾನಗಳನ್ನು ಕಾಂಗ್ರೆಸ್ ಪಡೆಯುವುದರೊಂದಿಗೆ ರಾಜ್ಯದಲ್ಲೂ ಅತಿ ಹೆಚ್ಚಿನ ಸ್ಥಾನಗಳಿಸುತ್ತದೆ, ಮತ್ತೆ ರಾಜ್ಯದಲ್ಲಿ  ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಈ ಸಂದರ್ಭದಲ್ಲಿ ಪೂಜಾರಿ ಹೇಳಿದರು.

ರಮಾನಾಥ ರೈ ಯವರೇ ನಿಮ್ಮಂಥ ಜನಸೇವಕರನ್ನು ಪಡೆದಿರುವುದು, ಕಾಂಗ್ರೆಸ್ ನ ಮತ್ತು ಈ ರಾಜ್ಯದ ಜನತೆಯ ಪುಣ್ಯವಾಗಿದೆ. ನೀವು ಅತಿ ಹೆಚ್ಚು ಅಂತರಗಳ ಮತಗಳಿಂದ ವಿಜಯಿಯಾಗುತ್ತೀರಿ. ನಿಮಗೆ ದೇವರ ದಯೆ ಇದೆ, ಬಂಟ್ವಾಳ ಜನತೆಯ ಆಶೀರ್ವಾದವೂ ಇದೆ ಎಂದು ನುಡಿದರು.

ರೈ ಯವರನ್ನು ಅವರ ವಾಹನದ ತನಕ ಬೀಳ್ಕೊಟ್ಟು ಪೂಜಾರಿಯವರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಬೇಬಿ ಕುಂದರ್,ಪಾಣೆ ಮಂಗಳೂರು ಬ್ಲಾಕ್ ಅಧ್ಯಕ್ಷರಾದ ಅಬ್ಬಾಸ್ ಅಲಿ, ರಾಜ್ಯ ಗೇರುಬೀಜ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಿ.ಹೆಚ್ ಖಾದರ್ ಉಪಸ್ಥಿತರಿದ್ದರು.


ಸಂಬಂಧಿತ ಟ್ಯಾಗ್ಗಳು

janardhan poojary Ramanath Rai ಗೇರುಬೀಜ ಕಾಂಗ್ರೆಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ