ಜೋರ್ಡಾನ್ ವೈದ್ಯನಿಂದ ಯವತಿಗೆ ದೋಖಾ

A Doctor from jordan cheated a girl

18-04-2018

ಬೆಂಗಳೂರು: ವಿವಾಹವಾಗುವುದಾಗಿ ನಂಬಿಸಿ 48 ಲಕ್ಷ ರೂ.ಗಳನ್ನು ಪಡೆದು ವಂಚಿಸಿರುವ ಜೋರ್ಡಾನ್‍ನಲ್ಲಿನ ವೈದ್ಯ ರಾಕೇಶ್ ಹಮೀಶ್ ವಿರುದ್ಧ ವಂಚನೆಗೊಳಗಾದ ಯುವತಿಯೊಬ್ಬರು ಸಿಐಡಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಮ್ಯಾಟ್ರಿಮೊನಿಯಲ್ಲಿ ಜೋರ್ಡಾನ್‍ನಲ್ಲಿ ವೈದ್ಯನಾಗಿರುವುದಾಗಿ ರಾಕೇಶ್ ಹಮೀಶ್ ಸ್ವವಿವರ ದಾಖಲಿಸಿದ್ದನ್ನು ನೋಡಿದ ಯುವತಿಯೊಬ್ಬರು ತನ್ನ ಸ್ವವಿವರವನ್ನು ನೀಡಿದ್ದಾರೆ. ಇದನ್ನು ನೋಡಿದ ರಾಕೇಶ್, ವಿವಾಹವಾಗುವುದಾಗಿ ತಿಳಿಸಿದ್ದಾನೆ.

ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕ ನಡೆಸುತ್ತಿದ್ದ ಇವರಿಬ್ಬರ ನಡುವೆ ಗಾಢವಾದ ವಿಶ್ವಾಸ ಬೆಳೆದಿದ್ದು, ಇದನ್ನು ನಂಬಿದ್ದ ಯುವತಿಯನ್ನು ರಾಕೇಶ್ ತಾನು ಜೋರ್ಡಾನ್‍ನಿಂದ ಭಾರತಕ್ಕೆ ವರ್ಗಾವಣೆ ಮಾಡಿಸಿಕೊಂಡು ಬರಲು 48ಲಕ್ಷ ರೂ.ಗಳ ಅಗತ್ಯವಿದೆ ಎಂದು ಹೇಳಿದ್ದಾನೆ. ಅದನ್ನು ನಂಬಿದ ಯುವತಿಯು 48 ಲಕ್ಷ ರೂ. ಹಣ ನೀಡಿದ್ದು, ಅದನ್ನು ಪಡೆದ ರಾಕೇಶ್ ನಾಪತ್ತೆಯಾಗಿದ್ದಾನೆ. ಆತನಿಗಾಗಿ ಹಲವು ದಿನಗಳ ಕಾಲ ಹುಡುಕಾಟ ನಡೆಸಿದ ಯುವತಿಯು ಸಿಐಡಿಯಲ್ಲಿ ದೂರು ದಾಖಲಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

matrimony fraud ಜಾಲತಾಣ ಯುವತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ