ನೀತಿ ಸಂಹಿತೆ: 23ಕೋಟಿ ನಗದು ವಶ

Code of Conduct: till date 23 crore cash seized

18-04-2018

ಬೆಂಗಳೂರು: ಬರುವ ಮೇ12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಪರವಾನಗಿ ಪಡೆದಿರುವ 97,037 ಶಸ್ತ್ರಾಸ್ತ್ರಗಳ ಪೈಕಿ 94,345 ಶಸ್ತ್ರಾಸ್ತ್ರಗಳನ್ನು ಠೇವಣಿ ಇರಿಸಿಕೊಳ್ಳಲಾಗಿದ್ದು, 50 ಶಸ್ತ್ರಾಸ್ತ್ರಗಳನ್ನು ಮುಟ್ಟುಗೋಲು ಹಾಕಿಕೊಂಡು 6 ಶಸ್ತ್ರಾಸ್ತ್ರದ ಪರವಾನಗಿಯನ್ನು ಪೊಲೀಸರು ರದ್ದು ಪಡಿಸಿದ್ದಾರೆ.

ಇಲ್ಲಿಯವರೆಗೆ 12944 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ. 24717 ಜಾಮೀನು ರಹಿತ ವಾರೆಂಟ್ ಹೊರಡಿಸಿ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಅಗತ್ಯವಿರುವ ಎಲ್ಲಾ ರೀತಿಯ ಮುಂಜಾಗೃತ ಕ್ರಮಗಳನ್ನು ಕೈಗೊಂಡು ಬಿಗಿ ಭದ್ರತೆ ಒದಗಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಮಾದರಿ ನೀತಿ ಸಂಹಿತೆ ಜಾರಿಗಾಗಿ ರಚಿಸಲಾಗಿರುವ ಫ್ಲೈಯಿಂಗ್ ಸ್ಕ್ವಾಡ್ಸ್ ಮತ್ತು ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳು ರಾಜ್ಯಾದ್ಯಂತ ಕಾರ್ಯಾಚರಣೆ ನಡೆಸುತ್ತಿದ್ದು ಹಲವು ಚುನಾವಣಾ ಆಕ್ರಮಗಳನ್ನು ಬಯಲಿಗೆಳೆದಿವೆ.

ಮಾದರಿ ನೀತಿ ಸಂಹಿತೆ ಜಾರಿಗೊಳಿಸುವಲ್ಲಿ 1,156 ಫ್ಲೈಯಿಂಗ್ ಸ್ಕ್ವಾಡ್ಸ್ ಮತ್ತು 1,255 ಸ್ಟಾಟಿಕ್ ಸರ್ವೆಲೆನ್ಸ್ ಟೀಮ್‍ಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಮಾದರಿ ನೀತಿ ಸಂಹಿತೆ ಜಾರಿಗಾಗಿ ರಚಿಸಿದ ಫ್ಲೈಯಿಂಗ್ ಸ್ಕ್ವಾಡ್ಸ್ ಮತ್ತು ಇತರೆ ಮಾದರಿ ನೀತಿ ಸಂಹಿತೆ ತಂಡಗಳು 12,537 ಗೋಡೆ ಬರಹಗಳು, 17,693 ಪೋಸ್ಟರ್ ಮತ್ತು 7,711 ಬ್ಯಾನರ್‍ ಗಳನ್ನು ಸಾರ್ವಜನಿಕ ಸ್ಥಳಗಳಿಂದ ತೆಗೆದುಹಾಕಿವೆ.

ಇದಲ್ಲದೆ ಕಳೆದ 24 ಗಂಟೆಗಳಲ್ಲಿ 24,04,400 ರೂ. ನಗದು, 3 ವಾಹನ, 56 ಸೀರೆ, 1150 ವಾಹನಗಳ ಸ್ಟಿಕ್ಕರ್ಸ್ ಹಾಗೂ 1200 ಕರಪತ್ರಗಳನ್ನು ವಶಪಡಿಸಿಕೊಂಡಿದೆ. ಒಟ್ಟಾರೆ 21,24,68,980 ರೂ. ನಗದು. 1,76,80,000 ರೂ. ಮೌಲ್ಯದ 7 ಕೆಜಿ 503 ಗ್ರಾಂ ಚಿನ್ನ, 11,47,200 ರೂ. ಮೌಲ್ಯದ ಬೆಳ್ಳಿ, 4.5 ಲೀಟರ್ ಮದ್ಯ, ವಾಹನಗಳು  ಮತ್ತಿತರ ವಸ್ತುಗಳು ಸೇರಿದಂತೆ 1,36,56,672 ರೂ. ಮೌಲ್ಯದ ವಸ್ತುಗಳನ್ನು ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳು ಮುಟ್ಟುಗೋಲು ಹಾಕಿಕೊಂಡಿವೆ. 

ಫ್ಲೈಯಿಂಗ್ ಸ್ಕ್ವಾಡ್‍ಗಳು 9,06,600 ರೂ. ನಗದು, 2472 ರೂ. ಮೌಲ್ಯದ 7.9 ಲೀಟರ್ ಮದ್ಯ, 9,50,000 ರೂ. ಮೌಲ್ಯದ 3 ವಾಹನಗಳು, ಗುಟ್ಕಾ, 9 ಕುಕ್ಕರ್ ಬಾಕ್ಸ್ ಮತ್ತು ಸ್ಯಾಂಡ್ ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ 1,68,96,977 ರೂ. ನಗದು, 13,09,22,460 ರೂ. ಮೌಲ್ಯದ 593.207 ಲೀಟರ್ ಮದ್ಯ ಮತ್ತಿತರ ವಸ್ತುಗಳು ಹಾಗೂ 1,48,88,060 ರೂ. ಮೌಲ್ಯದ 76 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತರೆ ಪೊಲೀಸ್ ತಂಡಗಳು 7,00,000 ರೂ. ನಗದು, 10 ಸೀರೆ, 160 ಲ್ಯಾಪ್‍ಟಾಪ್ ಮತ್ತು 509.02 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿವೆ. ಒಟ್ಟಾರೆ ಫ್ಲೈಯಿಂಗ್ ಸ್ಕ್ವಾಡ್ ತಂಡ, ಎಸ್‍ಎಸ್‍ಟಿ ಮತ್ತು ಇತರೆ ಪೊಲೀಸ್ ತಂಡಗಳು 23,00,65,957 ರೂ. ನಗದನ್ನು ವಶಪಡಿಸಿಕೊಂಡಿವೆ.

ಪ್ರಕರಣ ದಾಖಲು: ಫ್ಲೈಯಿಂಗ್ ಸ್ಕ್ವಾಡ್ ತಂಡ ಮತ್ತು ಇತರೆ ಪೊಲೀಸ್ ತಂಡಗಳು ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಕಳೆದ 24 ಗಂಟೆಗಳಲ್ಲಿ 18 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಿವೆ. ಒಟ್ಟಾರೆಯಾಗಿ ಫ್ಲೈಯಿಂಗ್ ಸ್ಕ್ವಾಡ್‍ಗಳು 315 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಿದೆ. ಎಸ್‍ಎಸ್‍ಟಿಗಳು ನಗದು ಮತ್ತಿತರ ವಸ್ತುಗಳಿಗೆ ಸಂಬಂಧಿಸಿದಂತೆ 06 ಪ್ರಕರಣಗಳಲ್ಲಿ ಎಫ್‍ಐಆರ್ ಸೇರಿ ಒಟ್ಟು 70 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಿದೆ.

ಅಬಕಾರಿ ಇಲಾಖೆಯು 7656.41 ಲೀಟರ್‍ ಗಳಷ್ಟು ಐಎಂಎಲ್ ಮದ್ಯವನ್ನು ಮತ್ತು 38,78,026 ರೂ. ಮೌಲ್ಯದ ಇತರೆ ಮದ್ಯವನ್ನು ವಶಪಡಿಸಿಕೊಂಡು 62 ಪ್ರಕರಣಗಳನ್ನು ದಾಖಲಿಸಿದೆ. ಮದ್ಯದ ಪರವಾನಗಿಯನ್ನು ಉಲ್ಲಂಘಿಸಿದ ಸಂಬಂಧ 66 ಪ್ರಕರಣಗಳನ್ನು ದಾಖಲಿಸಲಾಗಿದೆ.

ಮದ್ಯ ವಶ: ಮದ್ಯದ ಪರವಾನಗಿಯನ್ನು ಉಲ್ಲಂಘಿಸಿದ 1192 ಪ್ರಕರಣಗಳು, 810 ಪ್ರಕರಣಗಳು ಹಾಗೂ ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15 (ಎ) ಅನ್ವಯ 1822 ಪ್ರಕರಣಗಳನ್ನು ಹಾಗೂ ಎನ್‍ಡಿಪಿಎಸ್ ಕಾಯ್ದೆಯಡಿ 2 ಪ್ರಕರಣಗಳನ್ನು ದಾಖಲಿಸಲಾಗಿದೆ. 336 ವಿವಿಧ ಮಾದರಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚುನಾವಣೆ ಅಂಗವಾಗಿ ಅಬಕಾರಿ ಅಕ್ರಮಗಳ ಕುರಿತು ದೂರುಗಳನ್ನು ನೀಡಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಟೋಲ್ ಫ್ರೀ ನಂಬರ್ - 18004252550 ಪಡೆದುಕೊಂಡು ಕಾರ್ಯಾರಂಭ ಮಾಡುತ್ತಿದ್ದು, ಇದು ದಿನದ 24 ಗಂಟೆಗಳು (24/7) ಕಾರ್ಯನಿರ್ವಹಿಸುತ್ತಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ