‘ಚುನಾವಣೆಗೆ ನಾನು ಸ್ಪರ್ಧಿಸಲಾರೆ’-ಹುಲಿನಾಯ್ಕರ್18-04-2018

ಬೆಂಗಳೂರು: ತಾವು ಕೇಳದೇ ಇದ್ದರೂ ಬಿಜೆಪಿ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುವಂತೆ ನೀಡಿದ್ದ ಟಿಕೆಟ್ ಅನ್ನು ಹುಲಿನಾಯ್ಕರ್ ನಿರಾಕರಿಸಿದ್ದು, ತಾವು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಮಧುಗಿರಿ ವಿಧಾನ ಸಭಾ ಕ್ಷೇತ್ರದ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಹುಲಿನಾಯ್ಕರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ತಿಳಿಸಿದ್ದಾರೆ.

ಕೇಳದೇ ಇದ್ದರೂ ಬಿಜೆಪಿ ಹುಲಿನಾಯ್ಕರ್ ಅವರಿಗೆ ಟಿಕೆಟ್ ಘೋಷಣೆ ಮಾಡಿತ್ತು ಎಂದು ಹುಲಿನಾಯ್ಕರ್ ಆಪ್ತ ವಲಯಗಳು ತಿಳಿಸಿವೆ. ಈಗ, ಮಧುಗಿರಿ ವಿಧಾನಸಭಾ ಕ್ಷೇತ್ರಕ್ಕಾಗಿ ನೂತನ ಅಭ್ಯರ್ಥಿ ಹುಡುಕಾಟದಲ್ಲಿ ಬಿಜೆಪಿ ತೊಡಗಿದ್ದು, ಕೊರಟಗೆರೆ ಬಿಜೆಪಿ ಅಭ್ಯರ್ಥಿ‌ ಆಕಾಂಕ್ಷಿಯಾಗಿದ್ದ ಡಾ.ಲಕ್ಮೀಕಾಂತ್ಗೆ ನೀಡುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

Dr Hulinaykar M R election ಆಕಾಂಕ್ಷಿ ಅಭ್ಯರ್ಥಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ