ಮೊಬೈಲ್ ಅಂಗಡಿಯಲ್ಲಿ ಕಳ್ಳರ ಕರಾಮತ್ತು

3 lake worth mobiles stolen

18-04-2018

ಬೆಂಗಳೂರು: ಮತ್ತಿಕೆರೆಯ ವಿವೋ ಮೊಬೈಲ್ ಅಂಗಡಿ ರೋಲಿಂಗ್ ಶೆಟರ್ ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು 3 ಲಕ್ಷಕ್ಕೂ ಹೆಚ್ಚು ಮೌಲ್ಯದ ಹೊಸ ಮೊಬೈಲ್‍ಗಳನ್ನು ದೋಚಿ ಪರಾರಿಯಾಗಿದ್ದಾರೆ.

ಮತ್ತಿಕೆರೆಯ ಹೆಚ್‍ಎಂಟಿ ಮುಖ್ಯರಸ್ತೆಯಲ್ಲಿರುವ ವಿವೊ ಮೊಬೈಲ್ ಅಂಗಡಿಗೆ ರಾತ್ರಿ 2ರ ಸುಮಾರಿನಲ್ಲಿ ರೋಲಿಂಗೆ ಶೆಟರ್ ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು ಒಳಗೆಲ್ಲ ಜಾಲಾಡಿ 3 ಲಕ್ಷ ಮೌಲ್ಯದ 40 ಹೊಸ ಮೊಬೈಲ್ ಸೆಟ್‍ಗಳನ್ನು ದೋಚಿ ಪರಾರಿಯಾಗಿದ್ದಾರೆ.

ಅಂಗಡಿ ಮಾಲೀಕ ಸಂಜಯ್ ಅವರು ಬೆಳಿಗ್ಗೆ ಬಂದು ನೋಡಿದಾಗ ದುಷ್ಕರ್ಮಿಗಳು ರೋಲಿಂಗ್ ಶೆಟರ್ ಮುರಿದು ಕಳ್ಳತನ ಮಾಡಿರುವುದು ಕಂಡು ಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಯಶವಂತಪುರ ಪೊಲೀಸ್ ಇನ್ಸ್ಪೆಕ್ಟರ್ ಮುದ್ದುರಾಜ್ ಅವರು ತಪಾಸಣೆ ನಡೆಸಿ ಸಿಸಿಟಿವಿ ಕ್ಯಾಮರಾದ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ ದುಷ್ಕರ್ಮಿಗಳ ಪತ್ತೆಗೆ ಶೋಧ ನಡೆಸಿದ್ದಾರೆಂದು ಡಿಸಿಪಿ ಚೇತನ್‍ಸಿಂಗ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

mobile CCTV ದುಷ್ಕರ್ಮಿ ತಪಾಸಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ