‘ಈ ಬಾರಿ ಬಸವ ಜಯಂತಿ ಪ್ರಾಮುಖ್ಯತೆ ಪಡೆದಿದೆ’18-04-2018

ವಿಜಯಪುರ: ಇಂದು ಬಸವೇಶ್ವರ ಜಯಂತಿ ಹಿನ್ನೆಲೆ ವಿಜಯಪುರದಲ್ಲಿ ಸಚಿವ ಎಂ.ಬಿ.ಪಾಟೀಲ್ ಅವರು ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜಯಂತಿ ಆಚರಿಸಿದ್ದಾರೆ. ನಾಡಿನ ಜನತೆಗೆ ಬಸವ ಜಯಂತಿ ಶುಭಾಷಯಗಳನ್ನು ಕೋರಿದರು.

ನಂತರದಲ್ಲಿ ಮಾತನಾಡಿದ ಎಂ.ಬಿ.ಪಾಟೀಲ್ ಈ ಬಾರಿ ಬಸವ ಜಯಂತಿಯನ್ನು ಅತ್ಯಂತ ಸಂತೋಷದಿಂದ, ಹೆಮ್ಮೆಯಿಂದ ಆಚರಿಸುತ್ತಿದ್ದೇವೆ. ಪ್ರತ್ಯೇಕ ಬಸವ ಧರ್ಮ ಆಗಬೇಕು ಎಂದು ಹೋರಾಟ ನಡೆಸಿ, ಸಮಿತಿ ರಚಿಸಿ, ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದು ಈ ಬಾರಿಯ ಬಸವ ಜಯಂತಿ ಪ್ರಾಮುಖ್ಯತೆ ಪಡೆದಿದೆ. ಬಸವಣ್ಣನವರು ಹಾಕಿ ಕೊಟ್ಟಿರುವ ಶ್ರೇಷ್ಠ ವಿಶ್ವಮಾನವ ಧರ್ಮ, ಬಸವಧರ್ಮ, ಜಾಗತಿಕ ಧರ್ಮ ಆಗಬೇಕಿದೆ.

ವಿಶ್ವಗುರು ಬಸವಣ್ಣನವರಿಗೆ ಜನ್ಮ ಕೊಟ್ಟ ಪವಿತ್ರ ಭೂಮಿ ವಿಜಯಪುರ ಜಿಲ್ಲೆ ಎಂಬ ಹೆಮ್ಮೆ ಇದೆ. ಬಸವಣ್ಣನವರು ನಮ್ಮವರು, ನಮ್ಮ ಜಿಲ್ಲೆಯವರು ಎಂಬುದೇ ನಮಗೆ ಹೆಮ್ಮೆ. ವಿಶ್ವಕ್ಕೆ ಬಸವಣ್ಣನವರನ್ನು ಕೊಡುಗೆ ನೀಡಿದ ವಿಜಯಪುರವನ್ನು ಇಡೀ ವಿಶ್ವವೇ ನೋಡಬೇಕಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

M.B.Patil Government ವಿಶ್ವಗುರು ಬಸವಧರ್ಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ