ಯುವಕನ ಮೇಲೆ ಮಚ್ಚು-ಲಾಂಗ್ ನಿಂದ ಹಲ್ಲೆ

Horrific attack on a young man with 4-5 boys gang

18-04-2018

ಶಿವಮೊಗ್ಗ: ಬೈಕ್ ಹತ್ತುವಾಗ ಕಾಲು ತಾಗಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ಅಮಾಯಕ ಯುವಕನಿಗೆ ಮಚ್ಚು ಲಾಂಗುಗಳಿಂದ ಭೀಕರ ಹಲ್ಲೆ ಮಾಡಿರುವ ಘಟನೆ ಶಿವಮೊಗ್ಗದ ಸಾವರ್ ಲೈನ್ ರಸ್ತೆಯಲ್ಲಿ ನಡೆದಿದೆ. ಏಪ್ರಿಲ್ 14ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಚ್ಚು, ಲಾಂಗುಗಳಿಂದ ಹಲ್ಲೆ ನಡೆಸಿದ ಸಿಸಿಟಿವಿ ದೃಶ್ಯಗಳು ಕೂಡ ಲಭ್ಯವಾಗಿವೆ. ಅನಿಲ್ (26) ಹಲ್ಲೆಗೊಳಗಾದ ಯುವಕ.

ಅಂಬೇಡ್ಕರ್ ಜಯಂತಿಯಂದು ಸಾವರ್ ಲೈನ್ ರಸ್ತೆ ಬಳಿ ಅನಿಲ್ ಬೈಕ್ ಹತ್ತಿ ಹೊರಡುವಾಗ ಅತನ ಕಾಲ ಸೂರಜ್ ಎಂಬ ಯುವಕನಿಗೆ ತಗುಲಿತ್ತು. ಇದರಿಂದ ರೂಚ್ಚಿಗೆದ್ದ ಸೂರಜ್ ತನ್ನ ಸ್ನೇಹಿತರಾದ ಬಾಬು, ಕಾಡು, ಸಿಂಗ್ ಅವರೊಂದಿಗೆ ಬೈಕ್ನಲ್ಲಿ ಹಿಂಬಾಲಿಸಿ ಕೊಂಡು ಬಂದು ಏಕಾಏಕಿ ಮಚ್ಚು ಲಾಂಗುಗಳಿಂದ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡ ಅನಿಲ್ ನನ್ನು ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ