7ಕೋಟಿ ರೂ.ಮೌಲ್ಯದ ನಕಲಿ ನೋಟುಗಳು ಪತ್ತೆ

7 core with fake notes seized

18-04-2018

ಬೆಳಗಾವಿ: ಚುನಾವಣೆ ವೇಳೆ ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಎನ್ನಲಾದ 2ಸಾವಿರ ಮತ್ತು ಐನೂರು ರೂಪಾಯಿ ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿವೆ. ಅಂದಾಜು 7 ಕೋಟಿ ರೂ. ಮೌಲ್ಯದ ನಕಲಿ ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿ ಮೇರೆಗೆ ನಕಲಿ ನೋಟುಗಳನ್ನು ಸಂಗ್ರಹಿಸಿಟ್ಟಿದ್ದ ಮನೆ ಮೇಲೆ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಮತ್ತು ಎಪಿಎಂಸಿ ಪೊಲೀಸರಿಂದ ದಾಳಿ ನಡೆಸಿದ ವೇಳೆ, ಕಲರ್ ಪ್ರಿಂಟಿಂಗ್ ಮೆಷಿನ್ ನಲ್ಲಿ ಕಾಗದದ ಮೇಲೆ ಪ್ರಿಂಟ್ ಮಾಡಿರುವ ನೋಟುಗಳು, ಜೊತೆಗೆ ರದ್ದಾದ ಒಂದು ಸಾವಿರ ಮುಖ ಬೆಲೆಯ ನೋಟುಗಳು ಹಾಗೂ ಎರಡು ಸಾವಿರ ನೋಟಿನ ಅಳತೆಗೆ ಕಟ್ ಮಾಡಿರುವ ಬಿಳಿ ಕಾಗದ ಬಂಡಲ್ ಗಳು ಪತ್ತೆಯಾಗಿವೆ.

ಆರೋಪಿ ವಿಜಯಪುರ ಮೂಲದ ಅಜೀತಕುಮಾರ್ ನಿಡೋಣಿ ಎಂಬಾತನನ್ನು ಬಂಧಿಸಲಾಗಿದೆ. ವಿಶ್ವೇಶ್ವರಯ್ಯ ನಗರದ ಪಿಡಬ್ಲೂಡಿ ವಸತಿ ಗೃಹದ ಹಾಳು ಬಿದ್ದ ಮನೆಯಲ್ಲಿ ಈ ಅಕ್ರಮ ಕೃತ್ಯ ಪತ್ತೆಯಾಗಿದೆ. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ