ಅಮಿತ್ ಷಾಗೆ ಚಿಮೂ ಪಂಚ ಸಲಹೆ

Amit Shah to meet Chidananda Murthy

18-04-2018

ಬೆಂಗಳೂರು: ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭೇಟಿ ನೀಡಿದ್ದಾರೆ. ಈ ವೇಳೆ ಶಾಲು ಹೊದಿಸಿ ಚಿದಾನಂದ ಮೂರ್ತಿಯವರನ್ನು ಅಮಿತ್ ಷಾ ಸನ್ಮಾನಿಸಿದರು. ಬಿಜೆಪಿ ಪ್ರಣಾಳಿಕೆ ರಚನೆ ಬಗ್ಗೆ ಸಲಹೆ ಪಡೆಯುತ್ತಿರುವ ಅಮಿತ್ ಷಾಗೆ ಚಿದಾನಂದ ಮೂರ್ತಿ ಅವರು ಪಂಚ ಸಲಹೆ ಹಾಗು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

 1.ಪ್ರತ್ಯೇಕ ಲಿಂಗಾಯಿತ ಧರ್ಮ ಬೇಡ, ವೀರಶೈವ, ಲಿಂಗಾಯಿತ ಒಂದೇ, ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕವಡೆ ಕಾಸಿನ ಕಿಮ್ಮತ್ತು ನೀಡಬೇಡಿ.

2.ಕಾವೇರಿ ವಿಚಾರದಲ್ಲಿ ಕನ್ನಡಿಗರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ. ಮಹಾರಾಷ್ಟ್ರ ಪದೇ ಪದೇ ಕರ್ನಾಟಕದ ಜೊತೆ ತಗಾದೆ ತೆಗೆಯುತ್ತಿದೆ. ಇದನ್ನು ಬಗೆಹರಿಸಿ.

3. ಭಾರತ್ ಅನ್ನೋ ಪದವಿರಲಿ, ಆಂಗ್ಲರು ಬಿಟ್ಟು ಹೋದ ಇಂಡಿಯಾ ಅನ್ನೋ ಪದವನ್ನು ಬಿಟ್ಟು ಬಿಡಿ. ಸಂವಿಧಾನದಲ್ಲಿದ್ದರೂ ಇಂಡಿಯಾ ಪದವನ್ನು ತೆಗೆದುಬಿಡಿ. ಇಂಡಿಯಾ ಪದ ಇರುವಲ್ಲಿ ಭಾರತ್ ಅನ್ನೋ ಪದವಿರಲಿ.

4.ಮತಾಂತರಕ್ಕೆ ಕಡಿವಾಣ ಹಾಕಿ, ಹಿಂಧೂ ಧರ್ಮದ ಮತಾಂತರ ಕಾರ್ಯ ಹೆಚ್ಚಾಗುತ್ತಿದೆ.

5.ದಲಿತರನ್ನು ಬಿಜೆಪಿ ನಿರ್ಲಕ್ಷ್ಯಿಸುತ್ತಿದೆ. ಮೇಲ್ವರ್ಗದ ಜಾತಿ ಅನ್ನೋ ಹಣೆಪಟ್ಟಿ ಇದೆ. ಅದನ್ನು ತೊಡೆದು ದಲಿತದ ಅಭಿವೃದ್ಧಿಯ ಕೆಲಸ ಮಾಡಿ. ಎಂಬುವ ಸಲಹೆಗಳನ್ನು ಚಿಮೂ ಅವರು ನೀಡಿದ್ದಾರೆ. ಈ ವೇಳೆ ಅಮಿತ್ ಷಾ ಜೊತೆಗೆ ವಿ.ಸೋಮಣ್ಣ, ಯಡಿಯೂರಪ್ಪ, ಅನಂತ್ ಕುಮಾರ್, ಸದಾನಂದ ಗೌಡ ಇದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ