ಸಿ.ಎಂ.ಲಿಂಗಪ್ಪರನ್ನು ಎಂಎಲ್‌ಸಿ ಆಗಿ ನೇಮಕ ಮಾಡುವಂತೆ ಸರ್ಕಾರದಿಂದ ಮರು ಪ್ರಸ್ತಾವನೆ

Kannada News

18-05-2017

ಕೊಪ್ಪಳ:- ಸಿ.ಎಂ.ಲಿಂಗಪ್ಪ ರನ್ನು ಎಂಎಲ್‌ಸಿ ಆಗಿ ನೇಮಕ ಮಾಡುವಂತೆ ಸರ್ಕಾರದಿಂದ ಮರು ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಕೊಪ್ಪಳದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ರು. ಸಿ.ಎಂ. ಲಿಂಗಪ್ಪರನ್ನು ಸಮಾಜಿಕ ಸೇವೆಯಲ್ಲಿ ಪರಿಗಣಿಸಿ, ವಿಧಾನ‌ ಪರಿಷತ್ ಸದಸ್ಯರಾಗಿ ನೇಮಕ ಮಾಡುವಂತೆ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದ್ರೆ, ಅವರು ಸಮಾಜ ಸೇವಕರಾಗಿ ಕೆಲಸ ಮಾಡಿಲ್ಲ ಎಂದು ರಾಜ್ಯಪಾಲರು ಪ್ರಸ್ತಾವನೆ ತಿರಸ್ಕರಿಸಿದ್ದಾರೆ. ವಾಸ್ತವದಲ್ಲಿ ಲಿಂಗಪ್ಪ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದು , ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ಪರಿಗಣಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಬಗ್ಗೆ ರಾಜ್ಯಪಾಲರಿಗೆ ಮನವರಿಕೆ ಮಾಡಿ, ಮರು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದ್ರು. ಇನ್ನು ನನ್ನನ್ನು ಜೈಲಿಗೆ ಕಳುಹಿಸಬೇಕು ಎಂಬ ದುರುದ್ದೇಶ ದಿಂದ ಸರ್ಕಾರ ತನಿಖೆ ಮಾಡಿಸುತ್ತಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಜಂತಕಲ್ ಅಕ್ರಮ ಮೈನಿಂಗ್ ವಿಚಾರದಲ್ಲಿ ಎಸ್ ಐಟಿ ತನಿಖೆ ಮಾಡುತ್ತಿದೆ. ನಾವು ಯಾರ ವಿರುದ್ಧವೂ ದ್ವೇಷದ ರಾಜಕಾರಣ ಮಾಡುವುದಿಲ್ಲ. ತನಿಖೆ ನಡೆಯುತ್ತಿದ್ದು, ಯಾರೆ ತಪ್ಪು ಮಾಡಿದ್ದರೂ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದ್ರು. ನನ್ನ  ನಾಯಕತ್ವದಲ್ಲೇ ಕಾಂಗ್ರೆಸ್  ಮುಂದಿನ ಚುನಾವಣೆ  ಎದುರಿಸಲಿದೆ ಎಂದು ಪುನರುಚ್ಚರಿಸಿದ್ರು.⁠⁠⁠⁠

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ