ವಿಧಾನ ಪರಿಷತ್ ಗೆ ಎಂಎಲ್ಸಿ ಸೋಮಣ್ಣ ರಾಜೀನಾಮೆ

somanna bevinamarad resigned to MLC seat

18-04-2018

ಬೆಂಗಳೂರು: ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನ ಮರದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿಯವರ ನಿವಾಸದಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ.

ನಂತರದಲ್ಲಿ ಮಾತನಾಡಿ ಅವರು, ಪಕ್ಷದ ಕಾರಣದಿಂದ ರಾಜೀನಾಮೆ ನೀಡಿಲ್ಲ, ವ್ಯಕ್ತಿ ಕಾರಣದಿಂದ ರಾಜೀನಾಮೆ ನೀಡಿದ್ದೇನೆ, ಬಸವರಾಜ್ ಬೊಮ್ಮಾಯಿ ರಾಜೀನಾಮೆಗೆ ಕಾರಣ, ಬಿಎಸ್ ಯಡಿಯೂರಪ್ಪ ಮತ್ತು ಬೊಮ್ಮಾಯಿ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ, ಮನಸ್ಸಿಗೆ ಬೇಜಾರಾಗಿದೆ ಎಂದು ಹೇಳಿದರು. ಪಕ್ಷಕ್ಕೆ ಯಾವಾಗಲೂ ನಾನು ನಿಷ್ಠನಾಗಿರುತ್ತೇನೆ, ನಾಳೆ ಪಕ್ಷೇತರನಾಗಿ ಶಿಗ್ಗಾಂವ್ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ತಿಳಿಸಿದ್ದಾರೆ.

ಈ ವೇಳೆ ಯಾರ ಒತ್ತಡಕ್ಕಾದರೂ ಮಣಿದು ರಾಜೀನಾಮೆ ನೀಡುತ್ತಿದ್ದಾರಾ ಎಂಬ ಸಭಾಪತಿ ಶಂಕರ ಮೂರ್ತಿಯವರ ಪ್ರಶ್ನೆಗೆ, ಸ್ವ ಇಚ್ಛೆಯಿಂದ ಯಾರ ಒತ್ತಡ ಇಲ್ಲದೆ ರಾಜೀನಾಮೆ ನೀಡಿದ್ದೇನೆ, ಎಂದು ಹೇಳಿರುವುದಾಗಿ ಸಭಾಪತಿ ತಿಳಿಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ