ಬಿಜೆಪಿ ಹೈಕಮಾಂಡ್ ವಿರುದ್ಧ ಸಂಗಣ್ಣ ಅಸಮಾಧಾನ

mp sanganna karadi demanding for ticket

18-04-2018

ಕೊಪ್ಪಳ: ಬಿಜೆಪಿ ಹೈಕಮಾಂಡ್ ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುತ್ತಿದೆ ಎಂದು ಟಿಕೆಟ್ ಆಕಾಂಕ್ಷಿ ಕೊಪ್ಪಳದ ಸಂಸದ ಕರಡಿ ಸಂಗಣ್ಣ ಕಿಡಿಕಾರಿದ್ದಾರೆ. ಹೈಕಮಾಂಡ್ ಬಿ.ಎಸ್ ಯಡಿಯೂರಪ್ಪ ಅವರಿಗೆ ಹೊರತು ಬೇರಾವ ಸಂಸದರಿಗೂ ಟಿಕೆಟ್ ನೀಡುವುದಿಲ್ಲ ಎಂದು ಹೇಳಿತ್ತು. ಈಗ ಸಂಸದ ಶ್ರೀರಾಮುಲು ಅವರಿಗೆ ಟಿಕೆಟ್ ನೀಡಿದೆ, ಶೋಭಾ ಅವರಿಗೂ ಟಿಕೆಟ್ ನೀಡಲು ಸಜ್ಜಾಗುತ್ತಿದೆ, ಹೀಗಿರುವಾಗ ನನಗ್ಯಾಕೆ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಸಂಸದ ಶ್ರೀರಾಮುಲುಗೆ ಮಾತ್ರ ಟಿಕೆಟ್ ನೀಡಲಾಗುತ್ತೆ ಅಂತ ಹೈಕಮಾಂಡ್ ಹೇಳಿತ್ತು. ಆಗ ಎಲ್ಲಾ ಸಂಸದರು ಒಪ್ಪಿಗೆ ಸೂಚಿಸಿದ್ದರು. ನಾನೂ ಕೂಡ ಟಿಕೆಟ್ ಆಕಾಂಕ್ಷಿ ಆಗಿದ್ದೆ. ನನಗೂ ಟಿಕೆಟ್ ನೀಡಲು ಹೈಕಮಾಂಡ್ ಗೆ ಒತ್ತಾಯಿಸಿದ್ದೆ. ಇನ್ನೂ ಎರಡು ದಿನ ಹೈಕಮಾಂಡ್ ಗೆ ಟಿಕೆಟ್ ನೀಡಲು ಗಡುವು ಕೊಟ್ಟಿದ್ದೇನೆ, ತಕ್ಷಣ ಹೈಕಮಾಂಡ್ ನನಗೆ ಸ್ಪಷ್ಟನೆ ನೀಡಿ ಟಿಕೆಟ್ ನೀಡಲು ಮುಂದಾಗಬೇಕು ಎಂದು ಎಚ್ಚರಿಸಿದ್ದಾರೆ. ತಾನು ಜೆಡಿಎಸ್ ಪಕ್ಷ ಸೇರುವ ಯೋಚನೆ ಮಾಡಿಲ್ಲ ಎಂದ ಸಂಗಣ್ಣ ಅವರು, ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ