ಶೋಭಾ ಕರಂದ್ಲಾಜೆಗೆ ಡಿಕೆಶಿ ತಿರುಗೇಟು

DK shivakumar v/s Shobha Karandlaje

18-04-2018

ಬೆಂಗಳೂರು: ಸಂಸದೆ ಶೋಭಾ ಕರಂದ್ಲಾಜೆ ಅವರಲ್ಲಿ ಏನೋ ಸಮಸ್ಯೆ ಇದೆ, ಅವರು ಚೆಕ್ ಮಾಡಿಸಿಕೊಳ್ಳಲಿ ಎಂದು ಸಚಿವ ಡಿಕೆ ಶಿವಕುಮಾರ್ ಕರಂದ್ಲಾಜೆ ಅವರಿಗೆ ತಿರುಗೇಟು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಬಸವಣ್ಣನವರಿಗೆ ಮಾಲಾರ್ಪಣೆ ಮಾಡುವ ಯೋಗ್ಯತೆ ಇಲ್ಲ ಅನ್ನೋ ಶೋಭಾ ಕರಂದ್ಲಾಜೆ ಹೇಳಿಕೆ ಕುರಿತು ಮಾತನಾಡಿದ ಅವರು ಹೀಗೆ ಉತ್ತರಿಸಿದ್ದಾರೆ.

ಬಸವಣ್ಣನ ಜಯಂತಿ ದಿನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದವರು ಸಿದ್ದರಾಮಯ್ಯ, ಕಾಂಗ್ರೆಸ್ ಕೂಡ ಬಸವ ತತ್ವಗಳ ಮೇಲೆ ನಂಬಿಕೆ ಇಟ್ಟಿದೆ. ಅದೇ ಮಾರ್ಗದಲ್ಲಿ ಸರ್ಕಾರ ನಡೆದಿದೆ. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯಗೊಳಿಸಿದವರು ಸಿದ್ದರಾಮಯ್ಯ. ಇದನ್ನ ಯಡಿಯೂರಪ್ಪ ಸೇರಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಸ್ವಾಗತಿಸಿಸಿದ್ದರು ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

DK shivakumar Shobha Karandlaje ಬಸವ ತತ್ವ ಮಾಲಾರ್ಪಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ