ಎಟಿಎಂಗಳಲ್ಲಿ ನೋ ಕ್ಯಾಷ್

No cash in ATM

18-04-2018

ಬೆಂಗಳೂರು: ಬ್ಯಾಂಕ್ ನ ತಮ್ಮ ಖಾತೆಯಲ್ಲಿ ಹಣ ಇದೆ. ಆದರೆ, ಅದನ್ನು ಪಡೆಯಲಾಗುತ್ತಿಲ್ಲ. ಇದು ಕರ್ನಾಟಕ, ಮಧ್ಯಪ್ರದೇಶ, ಹರಿಯಾಣ, ಪಂಜಾಬ್ ಸೇರಿದಂತೆ ದೇಶದ ಒಂಭತ್ತು ರಾಜ್ಯಗಳ ಜನ ಎದುರಿಸುತ್ತಿರುವ ಪರಿಸ್ಥಿತಿ.

ಎಟಿಎಂಗಳಲ್ಲಿ, 'ನೋ ಕ್ಯಾಷ್' ಎನ್ನುವ ಬೋರ್ಡ್ ನೋಡುವ ಕರ್ಮ ಈವರೆಗೆ ಬೆಂಗಳೂರು ಹೊರತು ಪಡಿಸಿ ರಾಜ್ಯದ ಉಳಿದ ಎಲ್ಲಾ ಭಾಗದ ಜನರ ನಿತ್ಯದ ಬವಣೆಯಾಗಿತ್ತು. ಈಗ, ಕಳೆದ ಮೂರು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಎಟಿಎಂಗಳ ಮುಂದೆ 'ನೋ ಕ್ಯಾಷ್' ಬೋರ್ಡ್ ರಾರಾಜಿಸಲಾರಂಭಿಸಿದೆ. ಜನ ತಮ್ಮ ಖಾತೆಯಲ್ಲಿನ ಹಣ ಪಡೆಯಲು ಒಂದು ಎಟಿಎಂನಿಂದ ಮತ್ತೊಂದು ಎಟಿಎಂಗೆ ಅಲೆಯುವಂತಾಗಿದೆ.

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಹಣಕಾಸು ಇಲಾಖೆ ಕಾರ್ಯದರ್ಶಿಗಳು ಇನ್ನೂ ಮೂರು ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ, 500ರೂಪಾಯಿ ಮುಖ ಬೆಲೆಯ ನೋಟುಗಳ ಮುದ್ರಣವನ್ನು ಐದು ಪಟ್ಟು ಹೆಚ್ಚಿಸಲಾಗಿದೆ ಎಂದಿದ್ದಾರೆ.

ಆದರೆ, ಈಗ ಉದ್ಭವಿಸಿರುವ ಪ್ರಶ್ನೆ, ನೋಟುಗಳ ಕೊರತೆ ಆಗಿರುವುದಾದರೂ ಏಕೆ? 2016ರ ನವೆಂಬರ್ 8ರಂದು ನೋಟು ಬ್ಯಾನ್ ಮಾಡಿದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕಂಡು ಬಂದಿದ್ದ ದೃಶ್ಯ ಈಗ ಮತ್ತೆ ಕಂಡುಬರುತ್ತಿದೆ.

ಡಿಜಿಟಲ್ ಪೇಮೆಂಟ್ ಅನ್ನು ಪ್ರೋತ್ಸಾಹಿಸುವ ಸಲುವಾಗಿ ಎಟಿಎಂಗಳಲ್ಲಿ ಉದ್ದೇಶ ಪೂರ್ವಕವಾಗಿ ಹಣದ ಕೊರತೆ ಉಂಟುಮಾಡಲಾಗುತ್ತಿದೆಯೇ? ಇಲ್ಲವೇ, ಏನಾದರೂ ರಾಜಕೀಯ ಕಾರಣಗಳಿವೆಯೇ? ಎಂದು ಜನ ಚರ್ಚಿಸುವಂತಾಗಿದೆ. ಕಾರಣ ಏನೇ ಇರಲಿ ತಮ್ಮ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ತಾವೇ ಪಡೆಯಲಾಗುತ್ತಿಲ್ಲವಲ್ಲ ಎನ್ನುವುದನ್ನು ಭಾರತೀಯರು ಅರಗಿಸಿಕೊಳ್ಳವುದು ಕಷ್ಟ.


ಸಂಬಂಧಿತ ಟ್ಯಾಗ್ಗಳು

No cash ATM ಭಾರತೀಯ ಅಮಾನ್ಯಿಕರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ