ಬಾಡಿಗೆ ವಾಹನಗಳ ದರ ಹೆಚ್ಚಳಕ್ಕೆ ಬತ್ತಾಯ

rent vehicle: demanded to hike rates of rent

17-04-2018

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಬಳಸುವ ವಾಹನಗಳ ಬಾಡಿಗೆ ದರ ಹೆಚ್ಚಳ ಮಾಡುವಂತೆ ರಾಷ್ಟ್ರೀಯ ಚಾಲಕ ಒಕ್ಕೂಟ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ. ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಈ ಕುರಿತು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದು, ಗಗನ ಮುಖಿಯಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಏರಿಕೆಯಿಂದ ವಾಹನ ಮಾಲೀಕರಿಗೆ ತೊಂದರೆಯಾಗುತ್ತದೆ. ಈಗಿನ ದರ ಏರಿಕೆಗೆ ಅನುಗುಣವಾಗಿ ವಾಹನಗಳ ಬಾಡಿಗೆ ದರವನ್ನು ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಭದ್ರತಾ ಸಿಬ್ಬಂದಿ, ಚುನಾವಣಾ ಸಿಬ್ಬಂದಿ ಮತ್ತು ಚುನಾವಣಾಧಿಕಾರಿಗಳನ್ನು ಕರೆದೊಯ್ಯಲು ಸುಮಾರು 80,000ಕ್ಕೂ ಹೆಚ್ಚು ಅಧಿಕ ವಾಹನಗಳು ಹಾಗೂ ಚಾಲಕರ ಅಗತ್ಯವಿದೆ. ಇಂತಹ ಚಾಲಕರಿಗೆ ಸೂಕ್ತ ಭದ್ರತಾ ವ್ಯವಸ್ಥೆ, ಭತ್ಯೆ, ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆ, ವಿಶ್ರಾಂತಿ ಕೊಠಡಿಗಳನ್ನು ಸಮರ್ಪಕ ರೀತಿಯಲ್ಲಿ ಒದಗಿಸಿಕೊಡಬೆಕೆಂದು ಒತ್ತಾಯಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ