ವರ್ಗಾವಣೆ ಆದೇಶ ಎತ್ತಿ ಹಿಡಿದ ಸಿಎಟಿ

17-04-2018
ಬೆಂಗಳೂರು: ರಾಜ್ಯ ಸರ್ಕಾರ ಅಂತೂ ತನ್ನ ಹಠದಲ್ಲಿ ಗೆಲವು ಸಾಧಿಸಿದೆ. ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಹಾಸನ ಜಿಲ್ಲೆಯಿಂದ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರದ ಆದೇಶವನ್ನು ಕೇಂದ್ರ ಆಡಳಿತ್ಮಾಕ ನ್ಯಾಯಮಂಡಳಿ ಎತ್ತಿ ಹಿಡಿದಿದೆ.
ರಾಜ್ಯ ಸರ್ಕಾರ ತಮ್ಮನ್ನು ಹಾಸನ ಜಿಲ್ಲಾಧಿಕಾರಿ ಸ್ಥಾನದಿಂದ ವರ್ಗಾವಣೆ ಮಾಡಿದ್ದನ್ನು ರೋಹಿಣಿ ಸಿಂಧೂರಿ ಕೆಎಟಿಯಲ್ಲಿ ಪ್ರಶ್ನಿಸಿದ್ದರು. ರಾಜ್ಯ ಸರ್ಕಾರ ರೋಹಿಣಿ ಅವರನ್ನು ಹಾಸನದಿಂದ ವರ್ಗಾವಣೆ ಮಾಡಿತ್ತು. ಕೆಎಟಿ ಇದಕ್ಕೆ ತಡೆ ನೀಡಿತ್ತು. ಸರ್ಕಾರ ಸಿಎಟಿಯಲ್ಲಿ ಕೆಎಟಿ ಆದೇಶ ಪ್ರಶ್ನಿಸಿತ್ತು. ಸರ್ಕಾರದ ಆದೇಶ ಸರಿಯಾಗಿದೆ ಎಂದು ಸಿಎಟಿ ಈಗ ಅಭಿಪ್ರಾಯಪಟ್ಟಿದೆ. ವರ್ಗಾವಣೆ ಮಾಡಿದ ದಿನದಿಂದ ಅದೇಶ ಜಾರಿ ಎಂದು ಸಿಎಟಿ ತಿಳಿಸಿದೆ.
ಒಂದು ಕಮೆಂಟನ್ನು ಹಾಕಿ