ಆರ್ ಎಸ್ ಎಸ್ ವಿರುದ್ಧ ಮುತಾಲಿಕ್ ಆರೋಪ

 RSS v/s pramod mutalik

17-04-2018

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್‍ಎಸ್)ವು ವ್ಯವಸ್ಥಿತವಾಗಿ ಹಿಂದೂ ಮುಖಂಡರನ್ನು ಕೊಲೆ ಮಾಡುತ್ತಿದೆ ಎಂದು ಶ್ರೀ ರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಆರೋಪಿಸಿದರು.

ನಗರದ ಫ್ರೀಡಂ ಪಾರ್ಕ್ ನಲ್ಲಿ ಪ್ರವೀಣ್ ಭಾಯ್ ತೊಗಡಿಯಾ ಅವರ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿ ಶ್ರೀರಾಮ ಸೇನಾ ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ತನ್ನ ಇಡೀ ಜೀವನವನ್ನು ಹಿಂದುತ್ವದ ಉಳುವಿಗೆ ಮೀಸಲಿಟ್ಟ ಪ್ರವೀಣ್ ತೊಗಡಿಯಾ ಅವರನ್ನು ಆರ್.ಎಸ್.ಎಸ್ ಈಗ ಅವರನ್ನು ಮುಗಿಸಲು ಮುಂದಾಗಿದೆ. ಇದರ ಹಿಂದೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್.ಎಸ್.ಎಸ್ ಮುಖಂಡರ ಕೈವಾಡ ಇದೆ ಎಂದು ಆರೋಪಿಸಿದರು.

ದೇಶದಲ್ಲಿ ಎಲ್ಲೆಡೆ ಬಿಜೆಪಿ ಇದೆ. ಆದರೂ, ರಾಮ ಮಂದಿರ ನಿರ್ಮಾಣ ಮಾಡುತ್ತಿಲ್ಲ. ಜೊತೆಗೆ ಗೋವು ಮಾಂಸ ರಫ್ತು ಸಹ ನಿಂತಿಲ್ಲ ಎಂದ ಆರೋಪಿಸಿದ ಅವರು, ಸಂಸತ್ ನಲ್ಲಿ ಬಿಲ್ ಪಾಸ್ ಮಾಡಿ, ಮಂದಿರವೇಕೆ, ನಿರ್ಮಿಸಿಲ್ಲ ಎಂದು ಪ್ರಶ್ನೆ ಮಾಡಿದರು.

ರಾಮಮಂದಿರ ವಿವಾದ ಜೀವಂತವಾಗಿಟ್ಟು, ಕೇಂದ್ರ ಮೋದಿ ಸರ್ಕಾರ ಅಧಿಕಾರ ಪಡೆಯಲು ಸಂಚು ರೂಪಿಸಿದರೆ, ದತ್ತ ಪೀಠ ವಿವಾದ ಜೀವಂತವಾಗಿಟ್ಟು ರಾಜ್ಯ ಬಿಜೆಪಿ ಲಾಭ ಪಡೆಯಲು ಮುಂದಾಗಿದೆ. ಆದರೆ, ನಮ್ಮ ಬೇಡಿಕೆಗಳನ್ನು ಈಡೇರಿಸಲು ಡೋಂಗಿ ಹಿಂದುತ್ವವಾದಿಗಳನ್ನು ದೂರವಿಡಬೇಕೆಂದರು. ಲಾಭಕ್ಕಾಗಿ ಯಾವುದೇ ಕೆಲಸ ಮಾಡಲು ಸಿದ್ಧವಾಗಿದೆ. ಅದು ಅಲ್ಲದೆ, ಗೋವು ರಕ್ಷಕರನ್ನು ಜೈಲಿಗೆ ಹಾಕಲಾಗುತ್ತಿದೆ ಎಂದ ಅವರು, ಪ್ರವೀಣ್ ಭಾಯ್ ತೊಗಡಿಯಾ ಅವರಿಗೆ ನಾವು ಬೆಂಬಲ ನೀಡಬೇಕೆಂದರು.


ಸಂಬಂಧಿತ ಟ್ಯಾಗ್ಗಳು

Pramod Muthalik Sri Ram Sena ರಾಮಮಂದಿರ ಹಿಂದುತ್ವ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ