ವಿವಾಹಿತ ಮಹಿಳೆಗೆ ಪಾಗಲ್ ಪ್ರೇಮಿಯ ಕಿರುಕುಳ

Harassment on married women:complaint filed at

17-04-2018

ಬೆಂಗಳೂರು: ಪ್ರೀತ್ಸೆ ಪ್ರೀತ್ಸೆ ಎಂದು ಪಾಗಲ್ ಪ್ರೇಮಿಯೊಬ್ಬ ಬೆನ್ನು ಬಿದ್ದು ಕಿರುಕುಳ ನೀಡುತ್ತಿದ್ದಾನೆ ಎಂದು ವಿವಾಹಿತೆಯೊಬ್ಬರು ಮಲ್ಲೇಶ್ವರಂ ಪೊಲೀಸರಿಗೆ ದೂರು ನೀಡಿದ್ದಾರೆ. ನಾಯಿಯನ್ನು ಹಿಡಿದುಕೊಂಡು ಅಂಜಲಿ (ಹೆಸರು ಬದಲಾಯಿಸಲಾಗಿದೆ) ಎಂಬ ಮಹಿಳೆಯು ಮಲ್ಲೇಶ್ವರಂನ ರಿಗೆನ್ಸಿ ಬಳಿ ವಾಯು ವಿಹಾರಕ್ಕೆ ಹೋಗುವಾಗ ಅಪರಿಚಿತ ವ್ಯಕ್ತಿ ಬಂದು ಪ್ರೀತ್ಸೆ ಪ್ರೀತ್ಸೆ ಎಂದು ಕಿರುಕುಳ ನೀಡಿದ್ದಾನೆ.

ನಾನು ನಿನ್ನ ಇಷ್ಟ ಪಡುತ್ತಿದ್ದೇನೆ. ನಿಮ್ಮ ನಂಬರ್ ಕೊಡಿ ಎಂದು ಕಿರುಕುಳ ನೀಡುತ್ತಿದ್ದನು. ಆತನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ದುಷ್ಕರ್ಮಿ ನನ್ನ ಮುಖಕ್ಕೆ ಸಿಗರೇಟ್ ಹೊಗೆ ಬಿಟ್ಟಿದ್ದಾನೆ. ಅಷ್ಟೇ ಅಲ್ಲದೇ ಪ್ರತಿ ದಿನ ನನಗೆ ಕಿರುಕುಳ ನೀಡುತ್ತಿದ್ದು, ಪ್ರೀತಿಸದೇ ಇದ್ದರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅಂಜಲಿ ದೂರಿನಲ್ಲಿ ಆರೋಪಿಸಿದ್ದಾರೆ.

ನಾನು ಮನೆ ಕೆಲಸ ಮಾಡಿ ಮತ್ತೆ ನಾಯಿಯನ್ನು ಹಿಡಿದುಕೊಂಡು ಪೆಟ್ರೋಲ್ ಬಂಕ್ ಬಳಿ ಹೋದಾಗ ಅದೇ ವ್ಯಕ್ತಿ ಬೈಕಿನಲ್ಲಿ ಬಂದು ನನ್ನನ್ನು ಗುರಾಯಿಸಿ ಹಿಂಬಾಲಿಸಿ ನನ್ನನ್ನು ತಡೆದು ನಿಲ್ಲಿಸಿ ನಿನ್ನ ಪೋನ್ ನಂಬರ್ ಕೊಡು ನಿನ್ನನ್ನು ಇಷ್ಟಪಡುತ್ತಿದ್ದೇನೆಂದು ಎಂದಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ನಾನು ನನ್ನ ನಂಬರ್ ಕೊಡದೇ ನನ್ನ ಪತಿಗೆ ತಿಳಿಸುತ್ತೇನೆಂದು ಹೇಳಿದಾಗ ಆತ ಏಕಾಏಕಿ ನನ್ನ ಕೈಯನ್ನು ಹಿಡಿದುಕೊಂಡು ಎಳೆದಾಡಿ ಕೆನ್ನೆಗೆ ಹೊಡೆದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೇ ನೀನು ಫೋನ್ ನಂಬರ್ ನನಗೆ ಕೊಡದೇ ಹೋದರೆ ಹಾಗೂ ನಾನು ಹೇಳಿದಂತೆ ಕೇಳದೆ ಹೋದರೆ ನಿನ್ನನ್ನು ಕೊಲೆ ಮಾಡುತ್ತೇನೆಂದು ಪ್ರಾಣ ಬೆದರಿಕೆ ಹಾಕಿದ್ದಾನೆ. ಅಕ್ಕಪಕ್ಕದ ಜನರು ಬರುತ್ತಿದ್ದಂತೆ ಆ ವ್ಯಕ್ತಿ ಅಲ್ಲಿಂದ ಹೊರಟು ಹೋದನು ಎಂದು ಅಂಜಲಿ ಹೇಳಿದ್ದಾರೆ. ನನ್ನನ್ನು ಹಿಂಬಾಲಿಸಿ ತೊಂದರೆ ನೀಡಿ ಕೈ ಹಿಡಿದು ಎಳೆದಾಡಿ ಅಸಭ್ಯವಾಗಿ ವರ್ತಿಸಿದಲ್ಲದೇ ಪ್ರಾಣ ಬೆದರಿಕೆ ಹಾಕಿದ್ದಾನೆ. ಆತನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಹಿಳೆ ದೂರಿನಲ್ಲಿ ಮನವಿ ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Harrasement cigarate ಕಿರುಕುಳ ವಿಹಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ