ಎಚ್ಡಿಕೆ ವಿರುದ್ಧ ಕುರುಬರ ಪ್ರತಿಭಟನೆ

Kuruba organisation protests against HKD

17-04-2018

ಬೆಂಗಳೂರು: ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಅವರ ಪತ್ನಿ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಡಿ ಕುಮಾರಸ್ವಾಮಿ ಅವಹೇಳನ ವಾಗಿ ಮಾತನಾಡಿರುವುದನ್ನು ಖಂಡಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು. ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಮಂಗಳವಾರ ಬೆಳಿಗ್ಗೆ ಸೇರಿದ ಸಂಘದ ನೂರಾರು ಸದಸ್ಯರು, ಕುಮಾರಸ್ವಾಮಿ ಅಧಿಕಾರಕ್ಕೆ ಬಂದರೆ, ಸ್ತ್ರೀ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲಿದೆ ಎಂದು ಆರೋಪಿಸಿ ಘೋಷಣೆ ಕೂಗಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ರಾಮಚಂದ್ರಪ್ಪ, ನಮ್ಮ ರಾಜ್ಯ, ಜನ, ಸಂಸ್ಕೃತಿಗೆ ಪರಂಪರೆ ಇದೆ. ಚುನಾವಣಾ ಕಾರಣಕ್ಕೆ ಮಹಿಳೆ ಎಂಬುವುದನ್ನು ನೋಡದೆ, ತೀರಾ ತುಚ್ಛವಾಗಿ, ಮಾತನಾಡುವುದನ್ನು ಕಂಡರೆ, ಜೆಡಿಎಸ್ ಪಕ್ಷದ ತೆನೆ ಹೊತ್ತ ಮಹಿಳೆ ಅವಮಾನಕ್ಕೆ ಹೊತ್ತು ನಿಂತಿರುವಂತೆ ಎಂದು ಕಿಡಿಕಾರಿದರು.

ಕಲ್ಲಪ್ಪ ಹಂಡಿಭಾಗ್ ಅವರ ಪತ್ನಿಗೆ ನಾನು ಕೆಲಸ ಕೊಡಿಸಲು ಧ್ವನಿ ಎತ್ತದಿದ್ದರೆ, ಆಕೆ ಮೈ ಮಾರಿಕೊಳ್ಳಬೇಕಿತೆಂದು, ಕುಮಾರಸ್ವಾಮಿ ಹೇಳಿರುವುದು ಖಂಡನೀಯ. ಅವರು ಸ್ತ್ರೀಯರ ಮೇಲೆ ಇಟ್ಟಿರುವ ಗೌರವ ಪ್ರದರ್ಶನವಾಗಿದೆ ಎಂದು ಅವರು ಹೇಳಿದರು.

ಕಲ್ಲಪ್ಪ ಪ್ರಾಮಾಣಿಕ ಅಧಿಕಾರಿಯನ್ನು ಜಾತಿಯ ಕನ್ನಡಕದಿಂದ ಕಾಣುವುದು ನಿಜಕ್ಕೂ ಅಸಹ್ಯಕರ ಸಂಗತಿ. ಅದರಲ್ಲೂ, ಪ್ರಾಮಾಣಿಕ ಕಾರಣಕ್ಕಾಗಿ ಜೀವ ಕಳೆದುಕೊಂಡ ಅಧಿಕಾರಿಯ ಪತ್ನಿಯ ಬಗ್ಗೆ ಕೊಂಚವೂ ಅನುಕಂಪದಿಂದ ಕಾಣದೆ, ಹಿಯ್ಯಾಳಿಸಿರುವುದು ಬೇಸರದ ಸಂಗತಿ ಎಂದರು.


ಸಂಬಂಧಿತ ಟ್ಯಾಗ್ಗಳು

kallappa handibag Kuruba organisation ಸ್ವಾತಂತ್ರ್ಯ ಗೌರವ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ