ಬಾಲಕಿ ಮೇಲೆ ಅತ್ಯಾಚಾರ: 10ವರ್ಷ ಕಠಿಣ ಶಿಕ್ಷೆ

Rape case: 10 years of rigorous imprisonment

17-04-2018

ಬೆಂಗಳೂರು: ಇಬ್ಬರನ್ನು ವಿವಾಹವಾಗಿ ಇಬ್ಬರು ಹೆಣ್ಣು ಸೇರಿ ಮೂವರು ಮಕ್ಕಳಿದ್ದರೂ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಕಬ್ಬಾಳು ಬಳಿಯ ಲಾಡ್ಜ್ ಒಂದಕ್ಕೆ ಕರೆದೊಯ್ದು ಅತ್ಯಾಚಾರವೆಸಗಿ ಕೊಲೆ ಬೆದರಿಕೆ ಹಾಕಿದ್ದ ಆರೋಪಿಗೆ ನಗರದ ಸಿಸಿಹೆಚ್ ನ್ಯಾಯಾಲಯವು 25 ಸಾವಿರ ದಂಡ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

ಎರಡು ವಿವಾಹವಾಗಿ ಮೂವರು ಮಕ್ಕಳಿದ್ದರೂ ಇಂತಹ ಹೀನ ಕೃತ್ಯವೆಸಗಿದ್ದ ಆರೋಪಿ ಕನಕಪುರದ ಕರಡಿಗುಡ್ಡ ವಾಟರ್ ಟ್ಯಾಂಕ್ ನ ಆನಂದ (28)ನಿಗೆ ನಗರದ 54ನೇ ಸಿಸಿಹೆಚ್ ನ್ಯಾಯಾಲಯ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, 25 ಸಾವಿರ ರೂ.ಗಳ ದಂಡ ವಿಧಿಸಿ ಆದೇಶ ಹೊರಡಿಸಿದೆ

ಕಳೆದ 2017ರ ಮಾರ್ಚ್ 10ರಂದು ಅಪ್ರಾಪ್ತ ಬಾಲಕಿಯನ್ನು ಜರಗನಹಳ್ಳಿಯಲ್ಲಿ ಅಪಹರಿಸಿ ಕನಕಪುರದ ಕಬ್ಬಾಳು ಬಳಿಯ ಲಾಡ್ಜ್‍ವೊಂದಕ್ಕೆ ಕರೆದೊಯ್ದು ಅತ್ಯಾಚಾರವೆಸಗಿ ಯಾರಿಗಾದರು ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ, ಕೃತ್ಯ ನಡೆಸಿದ ಆರೋಪಿಯನ್ನು ಬಂಧಿಸಿದ್ದ ಪುಟ್ಟೇನಹಳ್ಳಿ ಪೊಲೀಸರು ಕನಕಪುರ 2ನೇ ಹೆಚ್ಚುವರಿ ಜಿಲ್ಲಾಸೆಷೆನ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ವಿಚಾರಣೆ ಪೂರ್ಣಗೊಳಿಸಿ ಆರೋಪಿಗೆ 10ವರ್ಷಗಳ ಶಿಕ್ಷೆ ವಿಧಿಸಿತ್ತು.ಇದರ ವಿರುದ್ಧ ಆರೋಪಿಯು ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿ ಜಾಮೀನು ಪಡೆದು ಹೊರ ಬಂದಿದ್ದನು.

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಡಿಸಿಪಿ ಡಾ.ಎಸ್.ಡಿ. ಶರಣಪ್ಪ ಅವರು ಸೂಕ್ತ ಸಾಕ್ಷ್ಯ ಸಂಗ್ರಹಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಈ ಸಂಬಂಧ ವಿಚಾರಣೆ ನಡೆಸಿದ ನಗರದ 54ನೇ ಸಿಸಿಹೆಚ್ ನ್ಯಾಯಾಲಯದ ನ್ಯಾಯಮೂರ್ತಿ ಎಂ.ಲತಾಕುಮಾರಿ ಅವರು ಆರೋಪಿಯನ್ನು ಅಪರಾಧಿ ಎಂದು ಆದೇಶ ನೀಡಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿದೆ.


ಸಂಬಂಧಿತ ಟ್ಯಾಗ್ಗಳು

Rape court ಕಾರಾಗೃಹ ಜಾಮೀನು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ