ಖೇಣಿಯನ್ನ ಕಾಂಗ್ರೆಸ್ ಗೆ ಕರೆದಿದ್ದೇ ಖರ್ಗೆ

Mallikarjun Kharge, Ashok Kheny and congress

17-04-2018

ಉದ್ಯಮಿ ಅಶೋಕ್ ಖೇಣಿಯನ್ನ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ದೇ ಮಲ್ಲಿಕಾರ್ಜುನ ಖರ್ಗೆಯವರಾ? ಖೇಣಿ ಪಕ್ಷಕ್ಕೆ ಬಂದರೆ ಬೀದರ್ನಲ್ಲಿ ಕಾಂಗ್ರೆಸ್‍ನ ಬಲವರ್ಧನೆಯಾಗುತ್ತದೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಒಂದು ಸೀಟ್‍ನ ಗ್ಯಾರಂಟಿ ಇರುತ್ತದೆ ಎಂದು ಹೇಳಿದವರು ಖರ್ಗೆಯವರಾ? ಇದೆಲ್ಲದಕ್ಕೂ ಉತ್ತರ ಹೌದು ಎಂದು ಹೇಳುತ್ತವೆ ಸೂಪರ್ ಸುದ್ದಿ ಸಂಪರ್ಕಿಸಿದ ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳು. ಹಾಗಾದರೆ ಖೇಣಿ ಪಕ್ಷಕ್ಕೆ ಸೇರಿದಾಗ ಅದನ್ನು ಖರ್ಗೆಯವರು ಏಕೆ ವಿರೋಧಿಸಿದರು ಈ ಕುತೂಹಲಕ್ಕೆ ಉತ್ತರ ಈಗ ಸ್ಪಷ್ಟವಾಗಿದೆ. ಖರ್ಗೆ ಖೇಣಿಯವರನ್ನು ಕಾಂಗ್ರೆಸ್ಸಿಗೆ ಮೊದಲ ಬಾರಿಗೆ ಆಹ್ವಾನಿಸಿದಾಗ ಕರ್ನಾಟಕದಲ್ಲಿ ಪರಿಸ್ಥಿತಿ ಬೇರೆಯೇ ಆಗಿತ್ತು. ರಾಜ್ಯದಲ್ಲಿ ಪಕ್ಷ ಬಲಿಷ್ಠವಾಗಿತ್ತು. ಬಹುಮತದಲ್ಲಿ ಗೆದ್ದೇ ಬಿಡುತ್ತೇವೆ ಎಂಬ ಗುಸುಗುಸು ರಾಜ್ಯಾದ್ಯಂತ ವ್ಯಾಪಿಸಿತ್ತು. ಆದರೆ ಖೇಣಿ ಕಾಂಗ್ರೆಸ್ ಸೇರುವ ಹೊತ್ತಿಗೆ ಪರಿಸ್ಥಿತಿ ಬದಲಾಗಿತ್ತು. ಜೆಡಿಎಸ್ ಕೂಡ ಬಲಿಷ್ಠವಾಗಿಬಿಟ್ಟಿತ್ತು. ಜನಾಭಿಪ್ರಾಯದ ಪ್ರಕಾರ ಅತಂತ್ರ ವಿಧಾನಸಭೆ ನಿಶ್ಚಿತವಾದಂತಿತ್ತು. ಅತಂತ್ರ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಲು ಜೆಡಿಎಸ್‍ನ ಸಹಾಯ ಕೇಳುವ ಪರಿಸ್ಥಿತಿ ನಿರ್ಮಾಣವಾದರೆ ಆ ಸಂದರ್ಭದಲ್ಲಿ ಜೆಡಿಎಸ್ ಖರ್ಗೆ ನೇತೃತ್ವದ ಕಾಂಗ್ರೆಸ್ಸಿಗೆ ಮಾತ್ರ ಬೆಂಬಲ ನೀಡುವುದಾಗಿ ಹೇಳಿದೆಯಂತೆ. ಅದನ್ನು ಮನಸ್ಸಿನಲ್ಲಿಟ್ಟುಕೊಂಡಿರುವ ಖರ್ಗೆಯವರು ಇನ್ನಾದರು ಖೇಣಿಯವರನ್ನು ಹತ್ತಿರ ಬಿಟ್ಟುಕೊಂಡರೆ ತಮ್ಮ ಭವಿಷ್ಯವೇನೋ ಹಾಳಗಿಬಿಡಬಹುದು ಎಂದು ಈಗಲಿಂದಲೇ ಖೇಣಿಯವರನ್ನು ವಿರೋಧಿಸುವಂತೆ ನಡೆದುಕೊಳ್ಳುತ್ತಿದ್ದಾರಂತೆ. ಹಾಗೆ ಕೆಲವು ಕಡೆ ಜೆಡಿಎಸ್‍ಗೂ ಅನುಕೂಲವಾಗುವಂತೆ ಅಭ್ಯರ್ಥಿಗಳನ್ನು ಹಾಕಿಸಿಕೊಂಡಿದ್ದಾರೆ ಎಂಬ ಗುಮಾನಿ ಇದೆ. ಇದೆಲ್ಲದರ ಮಧ್ಯೆ ತಮ್ಮನ್ನು ಪಕ್ಷಕ್ಕೆ ಸ್ವಾಗತಿಸಿದ್ದ ಖರ್ಗೆಯವರೇ ಈಗ ಯಾತಕ್ಕಾಗಿ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದಾರೆಂದು ಖೇಣಿಯವರು ಕಣ್‍ ಕಣ್ ಬಿಡುತ್ತಿದ್ದಾರೆ ಎಂಬ ವರದಿಯಾಗಿದೆ.


ಸಂಬಂಧಿತ ಟ್ಯಾಗ್ಗಳು

Ashok Kheny kharge ವಿಚಿತ್ರ ಭವಿಷ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ