ವರುಣಾದಲ್ಲಿ ಯತೀಂದ್ರ ಪರ ಸಿಎಂ ಪ್ರಚಾರ

cm siddaramaiah election campaign at varuna

17-04-2018

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಡಾ.ಯತೀಂದ್ರ ಅವರ ಪರವಾಗಿ ಭರ್ಜರಿ ಪ್ರಚಾರ ನಡೆಸಿದರು. ಕ್ಷೇತ್ರದ ಕೊಣನೂರು, ಹನುಮನಪುರ, ಕಾರ್ಯ, ತಗಡೂರು ಗ್ರಾಮದಲ್ಲಿ ಮುಖ್ಯಮಂತ್ರಿಯವರು ರೋಡ್ ಶೋ ಮೂಲಕ ಪ್ರಚಾರ ನಡೆಸಿ ಮತ ಯಾಚಿಸಿದರು.

ಪ್ರಚಾರದ ವೇಳೆ ಹನುಮನಪುರ ಗ್ರಾಮದ ಮುಖಂಡ ಬಸವರಾಜಪ್ಪ ಅವರ ಮನೆಗೆ ತೆರಳಿದ ಮುಖ್ಯಮಂತ್ರಿಯವರು, ಅನಾರೋಗ್ಯಕ್ಕೆ ಒಳಗಾಗಿರುವ ಬಸವರಾಜಪ್ಪ ಅವರ ಆರೋಗ್ಯ ವಿಚಾರಿಸಿದರು.

ನೆರೆದಿದ್ದ ಜನತೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಯವರು, ನಾನು ಈ ಕ್ಷೇತ್ರದ ಮಣ್ಣಿನ ಮಗ. ನನ್ನ ಮಗ ಯತೀಂದ್ರ. ಕಷ್ಟ ಸುಖಕ್ಕೆ ಆಗುವವರು ನಾವೇ ಹೊರತು ಹೊರಗಿನಿಂದ ಬಂದವರಲ್ಲ ಎಂದರು. ಸಂವಿಧಾನ ಬದಲಿಸಲು ಹೊರಟವರು ಬಿಜೆಪಿಯವರು. ಆ ಪಕ್ಷ ಡೋಂಗಿ ಪಕ್ಷ. ನುಡಿದಂತೆ ನಡೆಯುವವರು ನಾವು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ನಾವು ಬಿಜೆಪಿಯವರಂತೆ ಬಾಯಿ ಮಾತಿನಲ್ಲಿ ಹೇಳುವವರಲ್ಲ, ಮಾಡಿ ತೋರಿಸುವವರು ಎಂದರು. ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಪ್ರಚಾರದಲ್ಲಿ ಭಾಗಿಯಾಗಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ