ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಎಸ್.ಡಿ.ದಿಲೀಪ್ ಕುಮಾರ್!

SD Dilip Kumar as BJP

17-04-2018

ತುಮಕೂರು: ತುಮಕೂರು ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದ ಬೆನ್ನಲ್ಲೇ, ಗುಬ್ಬಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎಸ್.ಡಿ.ದಿಲೀಪ್ ಕುಮಾರ್ ಬಂಡಾಯದ ಬಾವುಟ ಹಾರಿಸಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಥಿಸುವುದಾಗಿ ಹೇಳಿರುವ ಅವರು, ಇದೇ ತಿಂಗಳ 20ರಂದು ನಾಮ ಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಇನ್ನು ಸ್ಥಳೀಯ ನಾಯಕರ ವಿರುದ್ಧ ಹರಿಹಾಯ್ದ ದಿಲೀಪ್ ಕುಮಾರ್ ‘’ಜಿಲ್ಲೆಯ ನಾಯಕರ ಕುತಂತ್ರದಿಂದ ನನಗೆ ಟಿಕೆಟ್ ಕೈ ತಪ್ಪಿದೆ. ಬಿಜೆಪಿ ನಾಯಕರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ, ನನಗೆ ಮುಂಚೆಯೇ ಇವರ ಒಳ ಸಂಚು ಗೊತ್ತಾಗಿತ್ತು’’ ಆದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ ಎಂದರು. ಯಡಿಯೂರಪ್ಪನವರೇ ನಮ್ಮ ನಾಯಕರು, ಕ್ಷೇತ್ರದಲ್ಲಿ ನನ್ನ ಗೆಲುವು ಖಚಿತ, ಗೆದ್ದ ಮೇಲೂ ನಾನು ಮತ್ತೇ ಬಿಜೆಪಿಗೆ ದುಡಿಯುವೆ ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rebellion S.D dileep ಒಳ ಸಂಚು ಅಭ್ಯರ್ಥಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ