ಸಿಎಂ ಮನೆ ಮುಂದೆ ಮನೋಹರ್ ಬೆಂಬಲಿಗರ ಆಕ್ರೋಶ

Protest by MLA Manohar Tahsildar followers in front of cm residency

17-04-2018

ಮೈಸೂರು: ಹಾಲಿ ಶಾಸಕ ಮನೋಹರ್ ತಹಸೀಲ್ದಾರ್ಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿರುವ ಹಿನ್ನೆಲೆ ಮೈಸೂರಿನ ಸಿಎಂ ನಿವಾಸದ ಬಳಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಹಾವೇರಿಯ ಹಾನಗಲ್ ನ ಹಾಲಿ ಶಾಸಕ ಮನೋಹರ್ ತಹಸೀಲ್ದಾರ್ಗೆ ಬದಲಾಗಿ, ಶ್ರೀನಿವಾಸ್ ಮಾನೆಗೆ ಟಿಕೆಟ್ ನೀಡಲಾಗಿದೆ ಇದರಿಂದ ಬೆಂಬಲಿಗರು ಅಸಮಾಧಾನಗೊಂಡಿದ್ದಾರೆ.

ಸ್ಥಳೀಯ ಮುಖಂಡರು ಹಾಗೂ ಸ್ಥಳೀಯ ಜನ ಪ್ರತಿನಿಧಿಗಳು ಸಿಎಂ ನಿವಾಸಕ್ಕೆ ಆಗಮಿಸಿ ಸಿಎಂಗೆ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಮೈಸೂರಿನ ಸಿಎಂ ನಿವಾಸದೆದುರು ಹಾನಗಲ್ ನಿಂದ ಬಂದಿದ್ದ ಪ್ರತಿಭಟನಾಕಾರರನ್ನು ನಿರ್ಲಕ್ಷಿಸಿ ಸಿಎಂ ಪ್ರಚಾರಕ್ಕೆ ಹೊರಟು ಹೋದ ಘಟನೆಯು ನಡೆಯಿತು. ಸಿಎಂ ವರ್ತನೆ ಖಂಡಿಸಿ ಆಕ್ರೋಶಗೊಂಡ ಮನೋಹರ್ ತಹಸೀಲ್ದಾರ್ ಬೆಂಬಲಿಗರು, ತಮಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆ ನಡೆಸೋದಾಗಿ ಎಚ್ಚರಿಕೆ ನೀಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ