ನಿಂಬಣ್ಣವರ್‌ ಬೆಂಬಲಿಗರಿಂದ ಕಲಘಟಗಿ ಬಂದ್

nibannavar-supporters call bandh in kalghatgi

17-04-2018

ಹುಬ್ಬಳ್ಳಿ: ಬಿಜೆಪಿ ಎರಡನೇ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಧಾರವಾಡದ ಕಲಘಟಗಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಮಹೇಶ್ ತೆಂಗಿನಕಾಯಿ ಅವರಿಗೆ ಟಿಕೆಟ್ ನೀಡಿದ್ದು, ಪ್ರಬಲ ಆಕಾಂಕ್ಷಿಯಾಗಿದ್ದ ಸಿ.ಎಮ್.ನಿಂಬಣ್ಣವರಿಗೆ ಟಿಕೆಟ್ ಕೈತಪ್ಪಿದ್ದರಿಂದ ಆಕ್ರೋಶಗೊಂಡ ಬೆಂಬಲಿಗರು, ಕಲಘಟಗಿ ಬಂದ್ ಮಾಡಿ ಪ್ರತಿಭಟನೆಗಿಳಿದಿದ್ದಾರೆ.

ಅಲ್ಲದೇ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಸದಸ್ಯರಿಂದ ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ. ಟಿಕೆಟ್ ತಪ್ಪಿದ್ದಕ್ಕೆ ನಿಂಬಣ್ಣವರ್‌ ಅಭಿಮಾನಿಗಳು ಬೀದಿಗಿಳಿದಿದ್ದಾರೆ. ನಗರದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿದೆ. ಆದರೆ ಟಿಕೆಟ್ಗಾಗಿ‌ ಕಲಘಟಗಿ ಪಟ್ಟಣ ಬಂದ್ ಮಾಡಿರುವುದ್ದಕ್ಕೆ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಪಕ್ಷದ ಬಿಕ್ಕಟ್ಟಿನಿಂದಾಗಿ ಸಾಮಾನ್ಯರಿಗೆ ತೊಂದರೆ ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ