ರಾಯಚೂರು ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ

Bjp 2nd list announced: outrage at raichur

17-04-2018

ರಾಯಚೂರು: ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ ಹಿನ್ನೆಲೆ, ಕಮಲ ಪಾಳೆಯದಲ್ಲಿ ಮತ್ತೆ ಹಲವೆಡೆ ಭಿನ್ನಮತ ಸ್ಪೋಟಗೊಂಡಿದೆ. ರಾಯಚೂರಿನ ಮಸ್ಕಿ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ಮಹದೇವಪ್ಪಗೌಡ ಅವರಿಗೆ ಟಿಕೆಟ್ ಕೈ ತಪ್ಪಿದ್ದು ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಮದದೇವಪ್ಪಗೌಡ ಬದಲಾಗಿ ತುರವಿಹಾಳ್ ಬಸವನಗೌಡ ಅವರಿಗೆ ಟಿಕೆಟ್ ನೀಡಿದ್ದು ಅಸಮಾಧಾನಗೊಂಡ ಬೆಂಬಲಿಗರು, ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಅದಲ್ಲದೇ ಮಸ್ಕಿ ಪುರಸಭೆ ಸದಸ್ಯರಿಂದ ಸಾಮೂಹಿಕ ರಾಜೀನಾಮೆಗೂ ನಿರ್ಣಯ ಕೈಗೊಂಡಿದ್ದಾರೆ.

ಮಹದೇವಪ್ಪಗೌಡ, ಯಡಿಯೂರಪ್ಪನವರಿಗೆ ಆತ್ಮೀಯರಾಗಿದ್ದರು, ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ 26ಸಾವಿರಕ್ಕೂ ಹೆಚ್ಚು ಮತಗಳಿಸಿದ್ದರು. ಈ ಬಾರಿ ಮಹದೇವಪ್ಪಗೌಡ ಅವರಿಗೆ ಟಿಕೆಟ್ ಫಿಕ್ಸ್ ಅಂತಾನೇ ಹೇಳಲಾಗುತ್ತಿತ್ತು. ಆದರೆ, ಟಿಕೆಟ್ ಘೋಷಣೆಯಾಗದ ಹಿನ್ನೆಲೆಯಲ್ಲಿ ಮಹದೇವಪ್ಪ ಅಭಿಮಾನಿಗಳು, ಬೆಂಬಲಿಗರು ಆಕ್ರೋಶಗೊಂಡಿದ್ದಾರೆ. ಮಸ್ಕಿ ಪುರಸಭೆಯ 13ಸದಸ್ಯರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಮಸ್ಕಿ ಪುರಸಭೆ ಬಿಜೆಪಿ ತೆಕ್ಕೆಯಲ್ಲಿದ್ದು ಎಲ್ಲಾ 13ಸದಸ್ಯರು ಮಹದೇವಪ್ಪ ಗೌಡರಿಗೆ ಬೆಂಬಲ ಸೂಚಿಸಿ ಇಂದು ರಾಜೀನಾಮೆ ನೀಡಲು ನಿರ್ಧಾರಿದ್ದಾರೆ ಎಂದು ತಿಳಿದು ಬಂದಿದೆ.


ಸಂಬಂಧಿತ ಟ್ಯಾಗ್ಗಳು

BJP 2nd list outrage ರಾಜೀನಾಮೆ ಪುರಸಭೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ