ಸಚಿವ ಮಂಜುಗೆ ಮತದಾರರ ತರಾಟೆ

villagers protest agains a manju at arkalgud

17-04-2018

ಬೆಂಗಳೂರು: ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಎ.ಮಂಜು ನಿನ್ನೆ ರಾತ್ರಿ ತಮ್ಮ ಮತ ಕ್ಷೇತ್ರ ಹಾಸನ ಜಿಲ್ಲೆ ಅರಕಲಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಲ್ಲೂರು ಗ್ರಾಮಕ್ಕೆ ಮತಯಾಚನೆಗೆಂದು ತೆರಳಿದ್ದಾಗ ಗ್ರಾಮಸ್ಥರು ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ನಮಗೆ ಭೂಮಿ ಇಲ್ಲ, ಮನೆಯಿಲ್ಲ, ಕುಡಿಯುವ ನೀರಿಲ್ಲ ಏನೂ ಅಭಿವೃದ್ಧಿ ಕಾರ್ಯನಡೆಸಿಲ್ಲ. ಕಳೆದ ಬಾರಿಯ ಚುನಾವಣೆ ವೇಳೆ ಮತಯಾಚನೆಗೆಂದು ಬಂದವರು ಐದು ವರ್ಷಗಳ ನಂತರ ಈಗ ಬರುತ್ತಿದ್ದೀರಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಚಿವ ಎ.ಮಂಜು, ಹಾಗಾದರೆ ನಾನು ಏನೂ ಮಾಡಿಲ್ಲವೇ ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದರಾದರೂ ಗ್ರಾಮಸ್ಥರ ಆಕ್ರೋಶ ಕಡಿಮೆಯಾಗಲಿಲ್ಲ. ಈ ಮಧ್ಯೆ, ಸಚಿವರ ಸಮರ್ಥನೆಗಿಳಿದ ಅವರ ಬೆಂಬಲಿಗರೊಂದಿಗೆ ಗಾಮಸ್ಥರು ವಾಗ್ವಾದ ನಡೆಸಿದರು.


ಸಂಬಂಧಿತ ಟ್ಯಾಗ್ಗಳು

A.Manju Animal husbandry ಮತಯಾಚನೆ ಆಕ್ರೋಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ