'ಎಲ್ಲಿಯೂ ಬಂಡಾಯ ಇಲ್ಲ, ಇದ್ದರೂ ಸರಿ ಹೋಗುತ್ತೆ'

There is no rebellion in ticket issue said DKS

16-04-2018

ಬೆಂಗಳೂರು: ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಲು ಸಿಎಂಗೆ ಭೀತಿ ಎಂಬ ವಿಚಾರದ ಕುರಿತು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಅವರು ಸಿಎಂ, ಮುಖ್ಯಮಂತ್ರಿ ಸ್ಪರ್ಧೆ ಮಾಡುತ್ತಾರೆ ಅಂದಾಗ ಜನಾ ಬೇಡಾ ಅಂತಾರಾ? ಎಂದು ಪ್ರಶ್ನಿಸಿ,  ಮನೆಗೆ ಬರುವ ಲಕ್ಷ್ಮೀನಾ ಯಾರಾದರೂ ಬೇಡಾ ಅಂತಾರೇನ್ರೀ ಎಂದು ಉತ್ತರಿಸಿದ್ದಾರೆ.

ಅಲ್ಲಿ ಸಿಎಂ ಆರು ಚುನಾವಣೆ ಮಾಡಿದೋರು, ಅವರಿಗೆ ಕ್ಷೇತ್ರದ ಬಗ್ಗೆ ಎಲ್ಲಾ ಗೊತ್ತಿರುತ್ತೆ ಎಂದರು. ಎಲ್ಲೆಲ್ಲಿ ಪ್ರಚಾರಕ್ಕೆ ಕರೀತಾರೆ ಅಲ್ಲೆಲ್ಲಾ ಹೋಗುತ್ತೇನೆ. ಬೊಮ್ಮನಹಳ್ಳಿಯಲ್ಲಿ ಮಹಿಳೆಗೆ ಟಿಕೆಟ್ ನೀಡಿದ್ದೇವೆ. ಇನ್ನು ಜೆಡಿಎಸ್ ಸರ್ಕಾರ ಬಂದರೆ ಜಿ.ಟಿ.ದೇವೇಗೌಡ ಜಿಲ್ಲಾ ಮಂತ್ರಿ ಎಂದಿದ್ದ ಹೆಚ್ಡಿಕೆ ವಿಚಾರದ ಕುರಿತು ಮೂರು ತಿಂಗಳ ಹಿಂದೆ ಅಲ್ಲಿ ಏನಾಗಿತ್ತು ಅನ್ನೋದು ಗೊತ್ತಾ ನಿಮಗೆ?  ಅಲ್ಲಿ ನಡೆದ ಆಂತರಿಕ ಚರ್ಚೆಯಾದ ಬಗ್ಗೆ ನಾನೇನಾದ್ರೂ ಬಾಯ್ಬಿಟ್ರೆ ಬೆಚ್ಚಿ ಬೀಳ್ತೀರ? ಅದೆಲ್ಲಾ ನಾನು ಈಗ ಹೇಳಲ್ಲ ಸಮಯ ಬರಲಿ ಎಂದಿದ್ದಾರೆ.

ಎಲ್ಲಿಯೂ ಬಂಡಾಯ ಇಲ್ಲ, ಇದ್ದರೂ ಸರಿ ಹೋಗುತ್ತೆ, ಮೊದಲ ಬಾರಿಗೆ ರಾಹುಲ್ ಗಾಂಧಿ ಆಕಾಂಕ್ಷಿಗಳನ್ನು ಕರೆದು ಮಾತನಾಡಿದ್ದಾರೆ, ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು. ‌ಅದಕ್ಕೆ ಎಲ್ಲರೂ ಶ್ರಮ ವಹಿಸಬೇಕಿದೆ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

D.K.Shivakumar election ಚಾಮುಂಡೇಶ್ವರಿ ಆಕಾಂಕ್ಷಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ